ಬೆಂಗಳೂರು: ಒಂದೆಡೆ ಗುಂಡಿಗಳಿಂದ ಬೆಂಗಳೂರಿನ ರಸ್ತೆಗಳು ತುಂಬಿ ಹೋಗಿದ್ದರೆ, ಬಿಎಂಟಿಸಿ ಬಸ್‌ಗಳ ಡ್ರೈವರ್‌ಗಳು ಗುಂಡಿ ತುಂಬಿದ ರಸ್ತೆಗಳಲ್ಲಿ ತನ್ನ ಬೇಜವಾಬ್ದಾರಿ ಚಾಲನೆಯನ್ನು ಮುಂದುವರಿಸಿದ್ದಾರೆ. ಇದರಿಂದಾಗಿ ರಾಜಧಾನಿಯಲ್ಲಿ ದಿನಕ್ಕೊಂದರಂತೆ ಬಿಎಂಟಿಸಿ ಅಡಿಗೆ ಬಿದ್ದು ಜನರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಇದೀಗ ರಾಜಾಜಿನಗರ 1 ಫಸ್ಟ್ ಬ್ಲಾಕ್ನಲ್ಲಿ ಬಿಎಂಟಿಸಿ ಬಸ್ ಹರಿದು ಬಾಲಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 9 ವರ್ಷದ ಭುವನಾ ಮೃತ ದುರ್ದೈವಿ. ರಾಜಾಜಿನಗರ 1ನೇ ಬ್ಲಾಕ್‌ನ ಸಿಗ್ನಲ್‌ನಲ್ಲಿ ನಿಂತಿದ್ದ ಮಗುವಿಗೆ ಬಿಎಂಟಿಸಿ ಬಸ್ ಬಂದು ಗುದ್ದಿದೆ.
ರಾಜಾಜಿನಗರ ಪಾಂಚಜನ್ಯ ವಿದ್ಯಾಪೀಠ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗ್ತಿದೆ. ಈಕೆಯ ಪೋಷಕರು ಬೆಂಗಳೂರಲ್ಲಿ ಜೋಳ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗ್ತಿದೆ. ಮಹಾಲಕ್ಷ್ಮಿ ಲೇಔಟ್ ಬೋವಿ ಪಾಳ್ಯದಲ್ಲಿ ವಾಸಿಸುತ್ತಿದ್ದರು. ಸದ್ಯ ಎಮ್ ಎಸ್ ರಾಮಯ್ಯ ಆಸ್ಪತ್ರೆ ಶವಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.