ಬೆಂಗಳೂರು: ದ್ವೇಷ ಭಾಷಣ ವಿರೋಧಿ ಮಸೂದೆ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡುವ ಉದ್ದೇಶ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದ್ವೇಷ ಭಾಷಣ ಮಸೂದೆ ಬಿಜೆಪಿ ಟಾರ್ಗೆಟ್ ಮಾಡಲು ತರ್ತಿಲ್ಲ.
ಅಧಿಕಾರದಲ್ಲಿ ನಾವೇ ಶಾಶ್ವತವಾಗಿ ಇರುತ್ತೇವಾ? ಬಿಜೆಪಿ ಅವರು ಬರಲ್ವಾ? ಯಾರೇ ಬಂದರೂ ಕಾಯ್ದೆ ಅದೇ ಇರುತ್ತದೆ ಎಂದು ಹೇಳಿದರು. ಮಂಗಳೂರಿನಲ್ಲಿ ಕೆ.ಸಿ ವೇಣುಗೋಪಾಲ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ,
ದೆಹಲಿಗೆ ಸಚಿವರ ನಿಯೋಗ ಹೋಗಬೇಕು ಅನ್ನೋದು ಎಲ್ಲಿ ಚರ್ಚೆ ಆಗಿತ್ತು? ವೇಣುಗೋಪಾಲ್ ಅವರೇ ಇಲ್ಲಿಗೆ ಬಂದಿದ್ರಲ್ಲ. ನಿನ್ನೆ ನಾನು ಭೇಟಿ ಮಾಡಿದ್ದೆ, ಅವ್ರು ಪಕ್ಕದಲ್ಲೇ ಕೂತಿದ್ರು. ಆದ್ರೆ ಯಾವುದೇ ರಾಜಕೀಯ ಚರ್ಚೆ ಮಾಡಲಿಲ್ಲ ಎಂದರು.



