ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಸರ್ಕಾರದ ವಿತ್ತ ಮಂತ್ರಿಗಳಾದ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಮಂಡಿಸಿರುವುದು ಪಿಪಿಪಿ (ಖಾಸಗಿ ಸಹಭಾಗಿತ್ವದ) ಮಾಡೆಲ್ ಮೂಲಕ ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಗದಗ ಜಿಲ್ಲಾಧ್ಯಕ್ಷರಾದ ಉಮರ್ ಫಾರೂಕ್ ಹುಬ್ಬಳ್ಳಿ ಖಂಡಿಸಿದ್ದಾರೆ.
Advertisement
ಅತೀ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕ ರಾಜ್ಯಕ್ಕೆ ಬಜೆಟ್‌ನಲ್ಲಿ ಅನ್ಯಾಯವಾಗಿದೆ.ಉತ್ತರದ ರಾಜ್ಯಗಳಿಗೆ ಅತೀ ಹೆಚ್ಚು ಹಣವನ್ನು ಕೊಟ್ಟು ಯೋಜನೆಗಳನ್ನು ರೂಪಿಸಿರುವುದು ಚುನಾವಣೆ ಮುಂದಿಟ್ಟುಕೊಂಡು ಮಾಡಿದ ಬಜೆಟ್ ಆಗಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಒಂದು ರೂಪಾಯಿಯನ್ನೂ ಹಂಚಿಕೆ ಮಾಡಿಲ್ಲ. ಬಡವರಿಗೆ ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಪೂರಕ ಯೋಜನೆಗಳಿಲ್ಲ. ಒಟ್ಟಾರೆ ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡುವ ಅಲ್ಪಸಂಖ್ಯಾತ ವಿರೋಧಿ ಬಜೆಟ್ ಇದಾಗಿದೆ ಎಂದಿದ್ದಾರೆ.