ಕಡಿಮೆಯಾಗಿಲ್ಲ ವಿರಾಟ್ ಮೇಲೆ ಅನುಷ್ಕಾಗೆ ಇರೋ ಕೋಪ: ಬೆಂಗಳೂರು ರಸ್ತೆ ಮಧ್ಯೆಯೇ ಮುನಿಸು ತೋರಿದ ಜೋಡಿ

0
Spread the love

ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು ಯಾವುದೇ ಸಮಸ್ಯೆ ಬಂದರು ಅದನ್ನು ತೋರಿಸಿಕೊಳ್ಳದೆ ಬಗೆಹರಿಸಿಕೊಂಡು ಮುಂದೆ ಹೋಗುತ್ತಿದ್ದಾರೆ. ಆದರೆ ಇತ್ತೀಚೆಗೆ ವಿರಾಟ್ ಕೊಹ್ಲಿ ನಟಿ ಅವನೀತ್ ಕೌರ್ ಅವರ ಬೋಲ್ಡ್ ಫೋಟೋ ಲೈಕ್ ಮಾಡಿ ಸುದ್ದಿ ಆಗಿದ್ದು ಈ ಬಗ್ಗೆ ಕೊಹ್ಲಲಿ ಸ್ಪಷ್ಟನೆ ಕೂಡ ನೀಡಿದ್ದರು. ಇದೇ ಕಾರಣಕ್ಕೆ ಅನುಷ್ಕಾ ಪತಿ ವಿರಾಟ್ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು ಇದೀಗ ವೈರಲ್ ಆಗಿರೋ ವಿಡಿಯೋ ಒಂದು ಇದಕ್ಕೆ ಸಾಕ್ಷಿ ಎನ್ನುವಂತಿದೆ.

Advertisement

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇತ್ತೀಚೆಗೆ ಬೆಂಗಳೂರಿನ ಎಂಜಿ ರೋಡ್​ನಲ್ಲಿರೋ ರೆಸ್ಟೋರೆಂಟ್ ಒಂದಕ್ಕೆ ತೆರಳಿದ್ದರು. ಈ ಸಂದರ್ಭದ ವಿಡಿಯೋನ ಈಗ ವೈರಲ್ ಮಾಡಲಾಗುತ್ತಿದೆ. ಕಾರಿನಿಂದ ಇಳಿಯುವಾಗ ಕೊಹ್ಲಿ ಬಂದು ಅನುಷಾ ಅವರ ಕೈ ಹಿಡಿಯಲು ಹೋದರು. ಆದರೆ, ಇದಕ್ಕೆ ಕ್ಯಾರೇ ಎನ್ನದ ಅನುಷ್ಕಾ ಕಾರಿನಿಂದ ಇಳಿದು ನೇರವಾಗಿ ರೆಸ್ಟೋರೆಂಟ್ ಒಳಗೆ ಹೋಗಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಈ ವಿಡಿಯೋ ನೋಡಿದ ಬಳಿಕ ಅನುಷ್ಕಾ ಹಾಗೂ ವಿರಾಟ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತುಗಳು ಕೇಳಿ ಬರ್ತಿದೆ. ಅನುಷ್ಕಾ ಹಾಗೂ ವಿರಾಟ್ ಯಾವಾಗಲೂ ಕೈ ಕೈ ಹಿಡಿದು ಸಾಗುತ್ತಾರೆ. ಆದರೆ ಇದೀಗ ಅನುಷ್ಕಾ ನಡೆದುಕೊಂಡಿರುವ ರೀತಿ ಹಲವರಿಗೆ ಅನುಮಾನ ಮೂಡುವಂತೆ ಮಾಡಿದೆ.


Spread the love

LEAVE A REPLY

Please enter your comment!
Please enter your name here