ಹುತಾತ್ಮ ವೀರಯೋಧನ ಸ್ಮಾರಕ ನಿರ್ಮಾಣಕ್ಕೆ ಮನವಿ

0
yodha
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹತ್ತು ವರ್ಷಗಳು ಗತಿಸಿದರೂ ಹುತಾತ್ಮ ಯೋಧನ ಸ್ಮಾರಕ ನಿರ್ಮಾಣಕ್ಕಾಗಿ ಜಾಗದ ಗಣಕೀಕೃತ ಪಹಣಿಯನ್ನು ಮಾಡಿಕೊಡದೆ ವೀರಯೋಧನಿಗೆ ಅವಮಾನಗೊಳಿಸುತ್ತಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಬಸವಲಿಂಗಪ್ಪ ಮುಂಡರಗಿ ಅವರ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

Advertisement

ಗದಗ ತಾಲೂಕ ಕೋಟುಮಚಗಿ ಗ್ರಾಮದ ಹುತಾತ್ಮ ವೀರಯೋಧ ಬಸವರಾಜ ಅಂದಪ್ಪ ರಮಾಣಿರವರು 2014ರಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿ ಹುತಾತ್ಮರಾಗಿದ್ದರು. ಹುತಾತ್ಮ ವೀರಯೋಧನ ಅಂತಿಮ ಸಂಸ್ಕಾರವನ್ನು ಗ್ರಾಮದ ಮುಖ್ಯ ಹೆದ್ದಾರಿ ರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ಜಾಗದಲ್ಲಿ ನೆರವೇರಿಸಿ, ಅವತ್ತಿನ ಸಮಯದಲ್ಲಿ ಹುತಾತ್ಮ ವೀರಯೋಧನ ಸ್ಮಾರಕ ಮತ್ತು ಉದ್ಯಾನವನಕ್ಕಾಗಿ ಅದೇ ಜಾಗದಲ್ಲಿ 130*130 ಅಡಿ ಜಾಗೆಯನ್ನು ಮಂಜೂರು ಮಾಡಿ ಠರಾವುಗೊಳಿಸಿ, ಕೈಬರಹ ಉತಾರವನ್ನು ಪೂರೈಸಿ ಕೊಟ್ಟಿದ್ದರಾದರೂ ಮುಂದುವರೆದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಮನವಿಯನ್ನು ಸ್ವೀಕರಿಸಿ, ಶೀಘ್ರವೇ ಈ ಜಾಗದ ಗಣಕೀಕೃತ ಪಹಣಿಯನ್ನು ತಯಾರಿಸಿ ಉದ್ಯಾನವನವನ್ನು ಅಭಿವೃದ್ಧಿಗೊಳಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here