ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪ್ರಾಥಮಿಕ ಹಂತದಲ್ಲಿಯೇ ಮಕ್ಕಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೋಳ್ಳಬೇಕು ಎಂದು ವಿಜ್ಞಾನ ಶಿಕ್ಷಕಿ ವಿ.ಎಂ. ಕಂಠಿ ಹೇಳಿದರು.
ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.೧ರಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು. ನಮ್ಮ ಶಾಲೆಯ ವಿಜ್ಞಾನ ಪ್ರಯೋಗಾಲಯವಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡರ ವಹಿಸಿದ್ದರು. ಎಂ.ಎಂ. ಮೇಗಲಮನಿ, ಎಂ.ಎಂ. ಕೊಪ್ಪಳ, ಕೆ.ಎಂ. ಹೆರಕಲ್, ಎಚ್.ಆರ್. ಭಜೆಂತ್ರಿ, ಎಸ್.ಎಚ್.ಉಪ್ಪಾರ, ವೀಣಾ.ಟಿ, ಎಸ್.ವಿ. ಹಿರೇಮಠ, ಎಸ್.ಡಿ. ಪಂಡಿತ, ನಂದಾ ಮಟ್ಟಿ, ಪವಿತ್ರಾ ಮಟ್ಟಿ, ಜ್ಯೋತಿ ಜಾಧಾವ, ಶಭಾನಾ ಡಾಲಾಯತ ಇದ್ದರು.