Homecultureರಂಭಾಪುರಿ ಶ್ರೀಗಳ ಮಾರ್ಚ್ ತಿಂಗಳ ಪ್ರವಾಸ

ರಂಭಾಪುರಿ ಶ್ರೀಗಳ ಮಾರ್ಚ್ ತಿಂಗಳ ಪ್ರವಾಸ

Spread the love

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ ಮಾರ್ಚ್ 2024ನೇ ಮಾಹೆಯ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತಿದೆ.

ಮಾ.1ರಂದು ಸವದತ್ತಿ ತಾಲೂಕ ಹರಳಕಟ್ಟಿಯಲ್ಲಿ ಲಿಂ. ಶ್ರೀ ಸಂಗಮೇಶ್ವರ ಅಜ್ಜನವರ ಪುಣ್ಯ ಸ್ಮರಣೋತ್ಸವ, 2ರಂದು ಸವದತ್ತಿ ತಾಲೂಕ ಹೂಲಿ ಸಾಂಬಯ್ಯನವರ ಮಠದಲ್ಲಿ ಲಿಂ. ಶ್ರೀ ಸಂಗಮೇಶ್ವರ ಅಜ್ಜನವರ ಲಿಂಗಾಂಗ ಸಾಮರಸ್ಯ ಸಮಾರಂಭ, 4ರಂದು ಹುಬ್ಬಳ್ಳಿ ತಾಲೂಕ ಹಳ್ಳಿಯಾಳದಲ್ಲಿ ಶ್ರೀ ನಂದಿಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದ ಸಾನ್ನಿಧ್ಯ ವಹಿಸುವರು.

ಮಾ. 5ರಂದು ಹರಿಹರ ತಾಲೂಕ ಮಲೇಬೆನ್ನೂರು ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಇಷ್ಟಲಿಂಗ ಮಹಾಪೂಜಾ ಸಮಾರಂಭ, 6 ಮತ್ತು 7ರಂದು ಮುದ್ದೇಬಿಹಾಳ ತಾಲೂಕ ಕುಂಟೋಜಿಯಲ್ಲಿ ಪುರ ಪ್ರವೇಶ ಮತ್ತು ಹಿರೇಮಠದ ನೂತನ ಶ್ರೀಗಳವರ ಗುರು ಪಟ್ಟಾಧಿಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಾ. 8ರಂದು ಬೆಳಿಗ್ಗೆ 9.30ಕ್ಕೆ ವಿಜಯಪುರ ಜಿಲ್ಲೆ ಹೊರ್ತಿ ಕ್ಷೇತ್ರದಲ್ಲಿ ಇಷ್ಟಲಿಂಗ ಮಹಾಪೂಜಾ-ಸಮಾರಂಭ, ಸಂಜೆ 6ಕ್ಕೆ ದಕ್ಷಿಣ ಸೊಲ್ಲಾಪುರ ತಾಲೂಕ ಮಾಳಕವಠೆ ಗ್ರಾಮದಲ್ಲಿ ಉತ್ಸವ ಮತ್ತು ಮಹಾಶಿವರಾತ್ರಿ ಸಮಾರಂಭ, 9ರಂದು ಆಳಂದ ತಾಲೂಕ ಚಲಗೇರಾದಲ್ಲಿ ಧರ್ಮ ಜಾಗೃತಿ ಸಮಾರಂಭ, 10ರಂದು ಲಕ್ಷ್ಮೇಶ್ವರ ತಾಲೂಕ ಮುಕ್ತಿಮಂದಿರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸುವರು.

ಮಾ. 14ರಂದು ಜಗಳೂರು ತಾಲೂಕ ಕೊಡದಗುಡ್ಡ ಕ್ಷೇತ್ರದಲ್ಲಿ ಯಾತ್ರಿ ನಿವಾಸ ಉದ್ಘಾಟನೆ ಮಾಡುವರು. ಮಾ. 20ರಿಂದ 26ರವರೆಗೆ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಮಹಾಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾ ರಥೋತ್ಸವ ಅಂಗವಾಗಿ ವಿವಿಧ ಧರ್ಮ ಸಮಾರಂಭಗಳ ಸಾನ್ನಿಧ್ಯ ವಹಿಸುವರು.

ಮಾ. 29ರಂದು ಸಕಲೇಶಪುರ ತಾಲೂಕ ಎಸಳೂರಿನಲ್ಲಿ ಲಿಂ. ಶ್ರೀ ಚನ್ನಮಲ್ಲಿಕಾರ್ಜುನ ಶ್ರೀಗಳ ಪುಣ್ಯ ಸ್ಮರಣೋತ್ಸವ ಹಾಗೂ ಇಷ್ಟಲಿಂಗ ಮಹಾಪೂಜಾ, 30ರಂದು ಸೊರಬ ತಾಲೂಕ ದುಗ್ಲಿಯಲ್ಲಿ ಜಾತ್ರಾ ಮಹೋತ್ಸವ ಸಮಾರಂಭ ಹಾಗೂ 31ರಂದು ಸೊರಬ ತಾಲೂಕ ಶಾಂತಪುರಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸುವರು ಎಂದು ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!