ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಮೂಲದ ಇಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Advertisement
ಸುಜನ್ ಮತ್ತು ಆದರ್ಶ್ ಬಂಧಿತರು. ಒಟ್ಟಾರೆ ಇಲ್ಲಿಯವರೆಗೆ ಒಂಭತ್ತು ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳಿಗೆ ಹಾಗೂ ಸಾಮಾನ್ಯ ಹೆಣ್ಣು ಮಕ್ಕಳಿಗೆ ಕೂಡ ಕಿಡಿಗೇಡಿಗಳು ಅಸಭ್ಯವಾಗಿ ಕಮೆಂಟ್ ಮಾಡುತ್ತಾರೆ. ಅಶ್ಲೀಲ ಸಂದೇಶಗಳಿಗೆ ಹೆದರಿ ಎಷ್ಟೂ ಮಹಿಳೆಯರು ಸುಮ್ಮನಾಗುತ್ತಾರೆ. ಆದರೆ ರಮ್ಯಾ ಅವರು ಅಂಥ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾದರು. ಅದರ ಪರಿಣಾಮವಾಗಿ ಆರೋಪಿಗಳನ್ನು ಬಂಧಿಸಿ, ತನಿಖೆ ಮಾಡಲಾಗುತ್ತಿದೆ.