ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯ ಇಂದು ಬ್ರಿಸ್ಬೇನ್‌ನ ಗಬ್ಬಾದಿಯಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡವು ತನ್ನ ಹನ್ನೊಂದರ ಆಟಗಾರರ ಬಳಗವನ್ನು ಪ್ರಕಟಿಸಿದ್ದು, ಒಂದೇ ಬದಲಾವಣೆ ಮಾಡಲಾಗಿದೆ. ವೇಗಿ ಮಾರ್ಕ್ ವುಡ್ ಬದಲಾಗಿ ಆರಂಭಿಕ ಬ್ಯಾಟ್ಸ್‌ಮನ್ ವಿಲ್ ಜ್ಯಾಕ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ವಿಲ್ ಜ್ಯಾಕ್ಸ್ ಇಂಗ್ಲೆಂಡ್ ಪರ ಈಗಾಗಲೇ ಎರಡು ಟೆಸ್ಟ್ ಪಂದ್ಯಗಳಲ್ಲಿ 89 ರನ್ ಗಳಿಸಿದ್ದಾರೆ. ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 4 ಶತಕ ಸೇರಿದಂತೆ 2591 ರನ್ ಗಳಿದ್ದು, ಬೌಲಿಂಗ್‌ನಲ್ಲಿ 49 ವಿಕೆಟ್‌ಗಳನ್ನು ಪಡೆದಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಕೇವಲ ಎರಡು ದಿನಗಳಲ್ಲಿ ಸೋತಿರುವ ಇಂಗ್ಲೆಂಡ್, ಎರಡನೇ ಟೆಸ್ಟ್‌ನಲ್ಲಿ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಲು ನಿರ್ಧರಿಸಿದೆ.
ಮೊದಲ ಪಂದ್ಯದಲ್ಲಿ ಎರಡು ಇನ್ನಿಂಗ್ಸ್‌ನಲ್ಲಿ 40 ಓವರ್‌ಗಳನ್ನು ಸಹ ಆಡಲು ವಿಫಲವಾಗಿದ್ದ ತಂಡವು, ಈಗ ಮೂವರು ಬೌಲರ್‌ಗಳು ಮತ್ತು ಎಂಟು ಬ್ಯಾಟರ್‌ಗಳೊಂದಿಗೆ (ಆಲ್‌ರೌಂಡರ್‌ಗಳು ಸೇರಿ) ಕ್ರಿಕೆಟ್ ಅಂಗಳಕ್ಕೆ ನಿಂತಿದೆ. ಇಂಗ್ಲೆಂಡ್ ತಂಡದ ಈ ಬದಲಾವಣೆ ಮತ್ತು ಮುಂದಿನ ಪ್ರದರ್ಶನ ಕುರಿತಂತೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಇಂಗ್ಲೆಂಡ್ ಆಡುವ XI: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಜೇಮೀ ಸ್ಮಿತ್, ವಿಲ್ ಜ್ಯಾಕ್ಸ್, ಗಸ್ ಅಟ್ಕಿನ್ಸನ್, ಬ್ರೈಡನ್ ಕಾರ್ಸೆ ಮತ್ತು ಜೋಫ್ರಾ ಆರ್ಚರ್.



