ಕಲಬುರಗಿ: ‘ಕಾಮಿಡಿ ಕಿಲಾಡಿ’ ಖ್ಯಾತಿಯ ಕಿರುತೆರೆ ನಟಿ ನಯನಾ ವಿರುದ್ಧ ಜಾತಿ ನಿಂದನೆಯಡಿ (ಅಟ್ರಾಸಿಟಿ ಕಾಯ್ದೆ) FIR ದಾಖಲಾಗಿದೆ.
ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದಲಿತ ಸೇನೆ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಭಂಡಾರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಹಾಸ್ಯನಟಿ ನಯನಾ ಅವರು ಅಕ್ಟೋಬರ್ 29ರಂದು ಮನಿಮಿತ್ರಾ ಕಂಪನಿಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಮತ್ತು ಜಾತಿ ನಿಂದನೆಯ ಪದಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾರ್ಯಕ್ರಮದಲ್ಲಿ ಶೋಷಿತ ಸಮುದಾಯವನ್ನು ಉದ್ದೇಶಿಸಿ ಅವಮಾನಕಾರಿ ಹೇಳಿಕೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಯನಾ ಅವರ ಮಾತುಗಳು ಶೋಷಿತ ಸಮುದಾಯದ ಮನೋಭಾವಕ್ಕೆ ನೋವುಂಟುಮಾಡಿದ್ದು, ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ್ ಭಂಡಾರಿ ಆಗ್ರಹಿಸಿದ್ದಾರೆ.



