HomeKarnataka Newsಕಲಬುರಗಿ ಇಎಸ್ಐ ಆಸ್ಪತ್ರೆಯಲ್ಲಿ ಮತಾಂತರಕ್ಕೆ ಯತ್ನ: MBBS ವಿದ್ಯಾರ್ಥಿ ವಿರುದ್ಧ ದೂರು ದಾಖಲು!

ಕಲಬುರಗಿ ಇಎಸ್ಐ ಆಸ್ಪತ್ರೆಯಲ್ಲಿ ಮತಾಂತರಕ್ಕೆ ಯತ್ನ: MBBS ವಿದ್ಯಾರ್ಥಿ ವಿರುದ್ಧ ದೂರು ದಾಖಲು!

For Dai;y Updates Join Our whatsapp Group

Spread the love

ಕಲಬುರ್ಗಿ:- MBBS ವಿದ್ಯಾರ್ಥಿಯೋರ್ವ ಆಸ್ಪತ್ರೆಯಲ್ಲಿ ರೋಗಿಗಳನ್ನು ಮತಾಂತರಕ್ಕೆ ಪ್ರೆರೇಪಿಸಿರುವ ಘಟನೆ ಕಲಬುರಗಿ ಇಎಸ್ಐ ಆಸ್ಪತ್ರೆಯಲ್ಲಿ ಜರುಗಿದೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಹಿಂದೂ ಮುಖಂಡರು, ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಿನೋ ಡಾಲಿಚಾನ್​ ಎಂಬ ಕೇರಳ ಮೂಲದ ವಿದ್ಯಾರ್ಥಿಯಿಂದ ಮತಾಂತರಕ್ಕೆ ಪ್ರೆರೇಪಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ವಿದ್ಯಾರ್ಥಿ, ಆಸ್ಪತ್ರೆಯಲ್ಲಿನ ರೋಗಿಗಳಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಪ್ರೇರೇಪಿಸುತ್ತಿದ್ದ ವಿಡಿಯೋ ವೈರಲ್​ ಆಗಿದೆ. ಮತಾಂತರಕ್ಕೆ ಪ್ರೆರೇಪಿಸುತ್ತಿದ್ದ ವಿಚಾರ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಬಳಿಕ, ವಿದ್ಯಾರ್ಥಿ ಹಿನೋ ಡಾಲಿಚಾನ್​ನನ್ನು ಹಿಡಿದು ಪ್ರಶ್ನಿಸಿದಾಗ, ತಾನು ಎಂಬಿಬಿಎಸ್​ ವಿದ್ಯಾರ್ಥಿ ಎಂದು ಹೇಳಿದ್ದಾನೆ. ಅಲ್ಲದೇ ತಾನು ಕೇವಲ ಓದಲು ಪೇಪರ್​​ ನೀಡುತ್ತಿದ್ದೇನೆ ಎಂದು ಹೇಳಿದ್ದಾನೆ.

ಆಗ ಹಿಂದೂ ಸಂಘಟನೆ ಕಾರ್ಯಕರ್ತರು ವಿದ್ಯಾರ್ಥಿಯನ್ನು ಹಿಡಿದು ತಪಾಸಣೆ ನಡೆಸಿದಾಗ, ಆತನ ಬ್ಯಾಗ್​ನಲ್ಲಿ ಕ್ರೈಸ್ತ್​ ಧರ್ಮದ ಕೆಲ ಅಂಶಗಳು ಮಳಯಾಳಂ ಮತ್ತು ಕನ್ನಡದಲ್ಲಿ ಬರೆದಿರುವ ಪುಸ್ತಕ ಪತ್ತೆಯಾಗಿದೆ.

ವಿದ್ಯಾರ್ಥಿ ಹಿನೋ ಡಾಲಿಚಾನ್​ನನ್ನು ಹಿಂದೂ ಸಂಘಟನೆ ಕಾರ್ಯಕರ್ತರು‌ ತೀವ್ರ ತರಾಟೆಗೆ ತೆಗೆದುಕೊಂಡರು.

ಮತಾಂತರಕ್ಕೆ ಯತ್ನಿಸಿದ ವಿದ್ಯಾರ್ಥಿ ಹಿನೋ ಡಾಲಿಚಾನ್ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಗುಲ್ಬರ್ಗಾ ವಿವಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!