ಚಾಮರಾಜನಗರ:- ಮಾದಪ್ಪನ ಭಕ್ತಾದಿಗಳೇ ನೀವು ಓದಲೇಬೇಕಾದ ಸ್ಟೋರಿ. ಮಲೈ ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಸೋಪು, ಶಾಂಪೂ ಬಳಕೆಗೆ ನಿಷೇಧ ವಿಧಿಸಲಾಗಿದೆ. ಈ ಸಂಬಂಧ ಮಲೆಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಆದೇಶ ಹೊರಡಿಸಿದೆ.
Advertisement
ಅಂತರಗಂಗೆಯಲ್ಲಿ ನಿತ್ಯ ನೂರಾರು ಭಕ್ತರು ಸ್ನಾನ ಮಾಡುತ್ತಾರೆ. ಸೋಪು, ಶಾಂಪೂ ಬಳಕೆಯಿಂದ ಮಲಿನಗೊಳ್ಳುತ್ತಿದೆ. ಅಂತರಗಂಗೆಯ ಶುಚಿತ್ವ, ಪಾವಿತ್ರ್ಯತೆ ಕಾಪಾಡಲು ಪ್ರಾಧಿಕಾರ ಮುಂದಾಗಿದೆ.
ಈ ಸಂಬಂಧ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.