ಮೆಲ್ಬೋರ್ನ್ : ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ನಡೆದಿದ್ದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದೆ. ಭಾರತ ನೀಡಿದ್ದ 127 ರನ್‌ಗಳ ಸಣ್ಣ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು ಕೇವಲ 13.2 ಓವರ್‌ಗಳಲ್ಲಿ ಗುರಿ ಮುಟ್ಟಿತು. ಆಸೀಸ್ ಪರ ಮಿಚೆಲ್ ಮಾರ್ಷ್ (46), ಟ್ರಾವಿಸ್ ಹೆಡ್ (28) ಹಾಗೂ ಜೋಶ್ ಇಂಗ್ಲಿಸ್ (20) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಇವರ ಬೆನ್ನಲ್ಲೇ ಬುಮ್ರಾ ಬೌಲಿಂಗ್ನಲ್ಲಿ 10 ಎಸೆತಗಳಲ್ಲಿ 14 ರನ್ಗಳಿಸಿದ್ದ ಓವೆನ್ ಹಾಗೂ ಮ್ಯಾಥ್ಯೂ ಶಾರ್ಟ್ ಖಾತೆ ತೆರೆಯದೇ ಬ್ಯಾಕ್ ಟು ಬ್ಯಾಕ್ ಎಸೆತದಲ್ಲಿ ಔಟ್ ಆದರು. ಸ್ಟೋಯಿನಿಸ್ ಅಜೇಯ 6 ರನ್‌ಗಳಿಸಿ ಆಸೀಸ್ ತಂಡವನ್ನ ಗೆಲುವಿನ ಗಡಿ ದಾಟಿಸಿದರು.
ಇದು ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರಿತು. ಆಸೀಸ್ ಪರ ಮಿಚೆಲ್ ಮಾರ್ಷ್ 26 ಎಸೆತಗಳಲ್ಲಿ 46 ರನ್ (4 ಸಿಕ್ಸ್, 2 ಬೌಂಡರಿ) ಹಾಗೂ ಟ್ರಾವಿಸ್ ಹೆಡ್ 15 ಎಸೆತಗಳಲ್ಲಿ 28 ರನ್‌ಗಳಿಸಿ (3 ಬೌಂಡರಿ, 1 ಸಿಕ್ಸ್) ಆರಂಭದಲ್ಲೇ 51 ರನ್‌ಗಳ ಜೊತೆಯಾಟ ಆಡಿದರು. ಇನ್ನುಳಿದಂತೆ ಜೋಶ್ ಇಂಗ್ಲಿಸ್ 20, ಮಿಚೆಲ್ ಓವನ್ 14, ಟಿಮ್ ಡೇವಿಡ್ 1, ಮಾರ್ಕಸ್ ಸ್ಟೊಯಿನಿಸ್ 6 ರನ್‌ಗಳಿಸಿದರು. ಭಾರತ ಪರ ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದುಕೊಂಡರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಭಾರತ ಆರಂಭದಲ್ಲೇ ಅಗ್ರ ಬ್ಯಾಟರ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮಧ್ಯಮ ಕ್ರಮಾಂಕದಲ್ಲಿ ಹರ್ಷಿತ್ ರಾಣಾ ಹಾಗೂ ಅಭಿಷೇಕ್ ಶರ್ಮಾರ ಅರ್ಧಶತಕ ಜೊತೆಯಾಟ ತಂಡದ ಮೊತ್ತ 100ರ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. ಅಭಿಷೇಕ್ ಶರ್ಮಾ 37 ಎಸೆತಗಳಲ್ಲಿ 68 ರನ್,
ಹರ್ಷಿತ್ ರಾಣಾ 33 ಎಸೆತಗಳಲ್ಲಿ 38 ರನ್‌ಗಳಿಸಿದ್ರೆ, ಶುಭ್‌ಮನ್ ಗಿಲ್ 5 ರನ್, ಶಿವಂ ದುಬೆ 4 ರನ್, ಅಕ್ಷರ್ ಪಟೇಲ್ 7 ರನ್, ಸಂಜು ಸ್ಯಾಮ್ಸನ್ 2 ರನ್, ಸೂರ್ಯಕುಮಾರ್ 1 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಜೋಶ್ ಹೇಜಲ್ವುಡ್ 3 ವಿಕೆಟ್ ಪಡೆದರೆ, ಕ್ಸೇವಿಯರ್ ಬಾರ್ಟ್ಲೆಟ್ ಹಾಗೂ ನಾಥನ್ ಎಲ್ಲಿಸ್ ತಲಾ 2 ವಿಕೆಟ್ ಹಾಗೂ ಮಾರ್ಕಸ್ ಸ್ಟೊಯಿನಿಸ್ 1 ವಿಕೆಟ್ ಪಡೆದುಕೊಂಡರು.


