ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಸಹಕಾರಿ ಬ್ಯಾಂಕುಗಳು ಪರಿಣಾಮಕಾರಿ ಕಾರ್ಯ ಮಾಡುತ್ತಿವೆ ಎಂದು ತಜ್ಞ ವೈದ್ಯ ಡಾ. ಪ್ರಕಾಶ ಸಂಕನೂರ ಹೇಳಿದರು.
ಅವರು ಗದುಗಿನ ದಿ. ಆಝಾದ್ ಕೋ-ಆಪ್ ಬ್ಯಾಂಕ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಗ್ರಾಹಕರ ಸಂಪರ್ಕ ಸಭೆಯಲ್ಲಿ ನೂತನ ವರ್ಷದ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸಣ್ಣ ಮತ್ತು ಮಧ್ಯಮ ವರ್ಗದ ಜನತೆಗೆ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳು ಬಹಳಷ್ಟು ಉಪಯುಕ್ತವಾಗಿವೆ. ತಕ್ಷಣ ಸಾಲ ಸೌಲಭ್ಯ ಸಿಗುವ ಜೊತೆಗೆ, ಸಹಕಾರ ಸೌಹಾರ್ದತೆ ದ್ವಿಗುಣಗೊಳ್ಳುವದು ಎಂದರು.
ಗದಗ ಪರಿಸರದಲ್ಲಿ ಆಝಾದ್ ಬ್ಯಾಂಕ್ ಬಹು ವರ್ಷಗಳಿಂದ ಈ ಭಾಗದ ಜನತೆಗೆ ಉತ್ತಮ ಸೇವೆ ಒದಗಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಬ್ಯಾಂಕ್ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ನೀಡುತ್ತ ಪ್ರಗತಿ ಹೊಂದಲಿ ಎಂದು ಶುಭ ಕೋರಿದರು.
ಅತಿಥಿಯಾಗಿ ಆಗಮಿಸಿದ್ದ ಗದಗ ಐಎಂಎ ಮಾಜಿ ಅಧ್ಯಕ್ಷ ಡಾ. ಪ್ಯಾರ್‌ಅಲಿ ನೂರಾನಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕು ಪ್ರಗತಿಪಥದಲ್ಲಿ ಮುನ್ನಡೆದಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು. ಬ್ಯಾಂಕ್‌ನ ಗ್ರಾಹಕರಾದ ಪ್ರೊ. ಎಂ.ಎಲ್. ಗುಳೇದಗುಡ್ಡ, ಅಬ್ದುಲ್ ಮುಲ್ಲಾ ಬ್ಯಾಂಕ್ ಪ್ರಗತಿಗೆ ಸಲಹೆ-ಸೂಚನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಚೇರಮನ್ ಸರಫರಾಜಅಹ್ಮದ್ ಎಸ್.ಉಮಚಗಿ ಮಾತನಾಡಿದರು. ವೇದಿಕೆಯ ಮೇಲೆ ಬ್ಯಾಂಕ್‌ನ ನಿರ್ದೆಶಕರು ಉಪಸ್ಥಿತರಿದ್ದರು. ಎಂ.ಎಚ್. ಜಮಾಲಸಾಬನವರ ಕುರಾನ್ ಪಠಿಸಿದರು. ವ್ಯವಸ್ಥಾಪಕ ನಿರ್ದೆಶಕ ಎ.ಜಿ. ಯರಗುಡಿ ಸ್ವಾಗತಿಸಿದರು. ಪ್ರಾ. ಮಸ್ತಾನಅಲಿ ಶಿರಹಟ್ಟಿ ನಿರೂಪಿಸಿದರು. ಶಾಖಾ ವ್ಯವಸ್ಥಾಪಕ ಆರ್.ಎಂ. ನದಾಫ್ ವಂದಿಸಿದರು.