ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ದಿ.ಆಝಾದ್ ಕೋ-ಆಪ್ ಬ್ಯಾಂಕ್‌ನ ಪ್ರಧಾನ ಕಚೇರಿಯ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಬ್ಯಾಂಕ್‌ನ ಚೇರಮನ್ ಜನಾಬ ಸರ್ಫರಾಜಅಹ್ಮದ್ ಉಮಚಗಿ ಭೂಮಿ ಪೂಜೆ ನೆರವೇರಿಸಿದರು.
ಗದಗ ಗಂಗಾಪೂರಪೇಟೆಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಪ್ರಧಾನ ಕಚೇರಿಯ ಪಕ್ಕದಲ್ಲಿಯೇ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಔಪಚಾರಿಕವಾಗಿ ಮಾತನಾಡಿದ ಚೇರಮನ್ ಸರ್ಫರಾಜಅಹ್ಮದ್ ಉಮಚಗಿ, ಬ್ಯಾಂಕ್ ಪ್ರಗತಿಯಲ್ಲಿ ಇದೊಂದು ಮೈಲಿಗಲ್ಲಾಗಿದ್ದು, ಬರಲಿರುವ ದಿನಗಳಲ್ಲಿ ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೌಲಭ್ಯ ನೀಡಲು ಬ್ಯಾಂಕ್ ಸನ್ನದ್ಧಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಹುಲಗಣ್ಣ ಬಳ್ಳಾರಿ, ಹಿರಿಯ ನಿರ್ದೇಶಕರಾದ ರಾಜೇಸಾಬ ಬಾಗಲಕೋಟ, ಇಕ್ಬಾಲ್ ಹಣಗಿ, ಪರಶುರಾಮ ಪಾತ್ರೋಟ, ಯಲ್ಲಪ್ಪ ತೋಟದ, ಶಾನವಾಜ ಉಮಚಗಿ, ಗಣ್ಯರಾದ ಜಾಫರಸಾಬ ಕರಡಿ, ಡಾ. ಎಂ.ಡಿ. ಸಾಮುದ್ರಿ, ಶಾಮಾಜ್ ಉಮಚಗಿ, ಮಹೇಶ್ವರಯ್ಯ ಕೊಟಗುಣಸಿಮಠ, ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎ.ಜಿ. ಯರಗುಡಿ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.