ಬಿಗ್ ಬಾಸ್ ಮನೆಯಲ್ಲಿದ್ದ ವೇಳೆ ಉತ್ತನ ಸ್ನೇಹಿತರಾಗಿದ್ದ ಗೌತಮಿ ಜಾದವ್ ಹಾಗೂ ಉಗ್ರಂ ಮಂಜು ದೊಡ್ಮನೆಯಿಂದ ಹೊರ ಬಂದ ಬಳಿಕವೂ ಅದೇ ಸ್ನೇಹ ಮುಂದುವರೆಸಿದ್ದಾರೆ. ಈ ಹಿಂದೆ ಉಗ್ರಂ ಮಂಜು ಹಾಗೂ ಪತಿಯೊಂದಿಗೆ ವನದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಗೌತಮಿ ಇದೀಗ ಮತ್ತೆ ಉಗ್ರಂ ಮಂಜು ಕುಟುಂಬಸ್ಥರ ಜೊತೆ ಅದೇ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಪ್ರತಿ ತಿಂಗಳು ಗೌತಮಿ ಮಂಗಳೂರಿನಲ್ಲಿರುವ ಮನದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಕಳೆದ ತಿಂಗಳೂ ತಾಯಿ ದರ್ಶನದ ಬಂದಿದ್ದ ನಟಿ ಬಳಿಕ ಧನರಾಜ್ ಆಚಾರ್ಯ ಕುಟುಂಬವನ್ನ ಭೇಟಿ ಮಾಡಿ ಬಂದಿದ್ರು. ಈ ಬಾರಿ ಅಮ್ಮನ ದರ್ಶನಕ್ಕೆ ಮಂಜು ಹಾಗೂ ಅವರ ತಂದೆ, ತಾಯಿಯನ್ನ ಜೊತೆಗೆ ಕರೆದುಕೊಂಡು ಹೋಗಿದ್ರು.
ಇನ್ನೂ ಇತ್ತೀಚೆಗೆ ಬಿಗ್ ಬಾಸ್ ಟ್ರೋಪಿ ಗೆದ್ದ ಹನುಮಂತ ಅವರನ್ನು ಭವ್ಯಾ ಗೌಡ ಭೇಟಿ ಮಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದ ಭವ್ಯಾ, One with smart ಹನುಮೂ.. ನಿನ್ನ ಒಳ್ಳೆತನಕೆ ದೇವರು ಒಳ್ಳೆದೆ ಮಾಡ್ಲಿ.. ಎಂದು ಬರೆದುಕೊಂಡಿದ್ದರು.