ಒಕ್ಕಲಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆ- ಮೈಸೂರಿನಲ್ಲಿ ಭಗವಾನ್ ವಿರುದ್ಧ FIR

0
Spread the love

ಮೈಸೂರು;- ಒಕ್ಕಲಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಮೈಸೂರಿನ ದೇವರಾಜ ಪೊಲೀಸ್​ ಠಾಣೆಯಲ್ಲಿ ಪ್ರೊ. ಭಗವಾನ್ ವಿರುದ್ಧ ಕೊನೆಗೂ ಎಫ್​ಐಆರ್​ ದಾಖಲಾಗಿದೆ. ಗಂಗಾಧರ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ FIR ದಾಖಲಾಗಿದೆ. ಅ. 13ರಂದು ಮೈಸೂರಿನ ಟೌನ್‌ಹಾಲ್ ಬಳಿ ಮಹಿಷ ದಸರಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಕೆ.ಎಸ್.ಭಗವಾನ್, ಒಕ್ಕಲಿಗರು ಸಂಸ್ಕೃತಿ ಹೀನರು ಹಾಗೂ ಪ್ರಾಣಿಗಳು ಎಂಬ ಮಾತುಗಳನ್ನಾಡಿ ಸಾರ್ವತ್ರಿಕವಾಗಿ ಅಪಮಾನ ಮಾಡಿದರು.

Advertisement

ಅಲ್ಲದೆ, ಹಿಂದು ಧರ್ಮ ಹಾಗೂ ಶ್ರೀರಾಮ, ಸೀತಾದೇವಿ, ಭಗವದ್ಗೀತೆ ಬಗ್ಗೆ ತೀರಾ ಹಗುರವಾದ ಮಾತನಾಡಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.ಕೆ.ಎಸ್.ಭಗವಾನ್ ವಿರುದ್ಧ ಒಕ್ಕಲಿಗರು ಆಕ್ರೋಶ ವ್ಯಕ್ತಪಡಿಸಿ, ಸಾಲು ಸಾಲು ಪ್ರತಿಭಟನೆಗಳನ್ನು ನಡೆಸಿದ್ದರು. ರಾಜ್ಯದ ಅನೇಕ ಪೊಲೀಸ್​ ಠಾಣೆಗಳಲ್ಲಿ ಭಗವಾನ್​ ವಿರುದ್ಧ ಒಕ್ಕಲಿಗ ಸಂಘಟನೆಗಳು ದೂರು ಸಹ ದಾಖಲಿಸಿದ್ದವು. ಅಂತಿಮವಾಗಿ ಮೈಸೂರಿನ ದೇವರಾಜ ಪೊಲೀಸ್​ ಠಾಣೆಯಲ್ಲಿ ಭಗವಾನ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here