ಬಾಗಲಕೋಟೆ:- ಕಾಶಿಯಲ್ಲಿ ನದಿಸ್ನಾನ ಮಾಡುವ ವೇಳೆ ಅವಘಡ ಸಂಭವಿಸಿದ್ದು, ನೀರಲ್ಲಿ ಮುಳುಗಿ ಬಾಗಲಕೋಟೆ ವ್ಯಕ್ತಿ ಸಾವನ್ನಪ್ಪಿದ ಘಟನೆ ಜರುಗಿದೆ.
44 ವರ್ಷದ ಸತೀಶ್ ಜೋಷಿ ಮೃತ ವ್ಯಕ್ತಿ. ಇವರು ಬಾಗಲಕೋಟೆ ಜಿ.ಪಂ ಹೊರಗುತ್ತಿಗೆ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ವಾರದ ಹಿಂದೆ ಸತೀಶ್ ತನ್ನ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಪ್ರಯಾಗ್‌ರಾಜ್ ಮಹಾ ಕುಂಭಮೇಳಕ್ಕೆ ಪ್ರಯಾಣ ಬೆಳೆಸಿದ್ದರು.
ಕುಂಭಮೇಳದಲ್ಲಿ ಭಾಗಿಯಾದ ಬಳಿಕ ಸತೀಶ್ ಹಾಗೂ ಕುಟುಂಬಸ್ಥರು ಅಲ್ಲಿಂದ ಕಾಶಿಗೆ ತೆರಳಿದ್ದರು. 35 ಜನ ಸೇರಿ ಪ್ರವಾಸಿ ಬಸ್‌ನಲ್ಲಿ ತೆರಳಿದ್ದರು. ಇಂದು ಬೆಳಗಿನ ಜಾವ ಕಾಶಿಯಲ್ಲಿ ನದಿಸ್ನಾನ ಮಾಡುವ ವೇಳೆ ನದಿಯಲ್ಲಿ ಮುಳುಗಿದ್ದ ಸತೀಶ್ ಶವವಾಗಿ ಹೊರಬಂದಿದ್ದಾರೆ.



