ಬಾಗಲಕೋಟೆ: ಎರಡು ಬೈಕ್ʼಗಳ ನಡುವೆ ಡಿಕ್ಕಿ: ಮೂವರು ಸಾವು

0
Spread the love

ಬಾಗಲಕೋಟೆ: ಬಾಗಲಕೋಟೆ ನಗರದ ಹೆಲಿಪ್ಯಾಡ್ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಬಾಗಲಕೋಟೆ ಬಿವಿವಿಯ ಶ್ರುತಿ ಒಂದಕುದರಿ (32), ಡೆಂಟಲ್ ಕಾಲೇಜ್ ಉಪನ್ಯಾಸಕಿ, ರಜನಿ ಒಂದಕುದರಿ (34), ಸಾಪ್ಟವೇರ್ ಇಂಜಿನಿಯರ್ ಅಭಿಷೇಕ್ ದೋತ್ರಿ (20) ಮೃತರು.

Advertisement

ಸ್ಕೂಟಿಯಲ್ಲಿದ್ದ ಮಹಿಳೆಯರು ಡಿವೈಡರ್ ಕ್ರಾಸ್​ ಮಾಡಿ ಅಡ್ಡ ಬಂದು ವೇಗವಾಗಿ ಹೊರಟಿದ್ದ ಯಮಹಾ ಬೈಕ್​ಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ರಭಸಕ್ಕೆ ಬೈಕ್​​ಗಳು ಪೀಸ್​ ಪೀಸ್​ ಆಗಿವೆ. ಸ್ಥಳಕ್ಕೆ ಬಾಗಲಕೋಟೆ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಸಾವಿಗೀಡಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here