ದರ್ಶನ್ ಸಾಯಿಸಿದ್ದಾರೆ ಅನ್ನೋದು ಎಲ್ಲೂ ಪ್ರೂವ್ ಆಗಿಲ್ಲ ಅಲ್ವಾ: ನಟ ಪ್ರೇಮ್ ಪ್ರಶ್ನೆ

0
Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ಎರಡು ದಿನಗಳಿಂದ ಅನೇಕ ಬೆಳವಣಿಗೆಗಳು ಆಗುತ್ತಿವೆ. ಇದರ ನಡುವೆ ನಟ ಪ್ರೇಮ್ ನೀಡಿರುವ ಹೇಳಿಕೆ ಕೂಡ ಸದ್ದು ಮಾಡುತ್ತಿದೆ. ರೇಣುಕಾಸ್ವಾಮಿ ಮಾಡಿದ್ದು ಒಳ್ಳೆಯ ಕೆಲಸ ಅಲ್ಲ ಎಂದು ದರ್ಶನ್ ಪರ ಪ್ರೇಮ್ ಮಾತನಾಡಿದ್ದಾರೆ. ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಈ ಪ್ರಕರಣದಿಂದ ದರ್ಶನ್ ಬೇಗ ಆಚೆ ಬರಲಿ ಎಂದಿದ್ದಾರೆ. ಅವರು ಕಾಮನ್ ಮ್ಯಾನ್ ಅಲ್ಲ. ಇಂಡಸ್ಟ್ರಿಗೆ ದರ್ಶನ್ ಅವರ ಕಾಂಟ್ರಿಬ್ಯೂಷನ್ ತುಂಬಾ ಇದೆ.

Advertisement

ಅವರ ಮೇಲೆ ನಿರ್ಮಾಪಕರು ಕೋಟಿಗಟ್ಟಲೇ ಬಂಡವಾಳ ಹೂಡಿದ್ದಾರೆ. ಕನ್ನಡ ಇಂಡಸ್ಟ್ರಿಯಲ್ಲಿ ಇರುವ ಕೆಲವೇ ಸೂಪರ್ ಸ್ಟಾರ್‌ಗಳಲ್ಲಿ ದರ್ಶನ್ ಕೂಡ ಒಬ್ಬರು ಸೂಪರ್ ಸ್ಟಾರ್. ಹಾಗಾಗಿ ಚಿತ್ರರಂಗಕ್ಕೆ ಕೊಡುಗೆ ಬೇಕಿದೆ. ಚಿತ್ರಮಂದಿರದಲ್ಲಿ ಜನ ತುಂಬೋ ಅಂತದ್ದು ಆಗಿರಬಹುದು. ಯಾವುದೇ ವಿಚಾರ ಆಗಿದ್ರು ಯಾವಾಗಲೂ ಅವರು ಉನ್ನತ ಸ್ಥಾನದಲ್ಲಿ ಇರುತ್ತಿದ್ದರು. ಸಿನಿಮಾಗೆ ದರ್ಶನ್ ಬೇಕು. ಈ ಕೇಸ್ ಏನಾಗಿದೆ ಅಂತ ಗೊತ್ತಿಲ್ಲ. ಅದು ಏನೇ ಆಗಿರಲಿ ಅವರು ನಿರಪರಾಧಿಯಾಗಿ ಆಚೆ ಬರಲಿ. ಅವರಿಗೆ ಬೇಲ್ ಬೇಗ ಸಿಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ನಮಗೂ ಆ ಫೋಟೋಗಳ ಬಗ್ಗೆ ಗೊತ್ತಿಲ್ಲ. ಸದ್ಯ ಈ ಕೇಸ್ ಕಾನೂನಿನ ಚೌಕಟ್ಟಿನಲ್ಲಿದೆ. ಇದರ ಬಗ್ಗೆ ನಾವೇನು ಮಾತನಾಡೋಕೆ ಆಗಲ್ಲ. ರೇಣುಕಾಸ್ವಾಮಿ ಕುಟುಂಬದ ಬಗ್ಗೆ ನಮಗೂ ನೋವಿದೆ. ಆದರೆ ರೇಣುಕಾಸ್ವಾಮಿ ಮಾಡಿದ್ದು ಒಳ್ಳೆಯ ಕೆಲಸ ಅಲ್ಲ. ದರ್ಶನ್ ಸಾಯಿಸಿದ್ದಾರೆ ಅನ್ನೋದು ಎಲ್ಲೂ ಪ್ರೂವ್ ಆಗಿಲ್ಲ ಅಲ್ವಾ ಎಂದಿದ್ದಾರೆ. ರೇಣುಕಾಸ್ವಾಮಿ ಮಾಡಿರುವ ಅಶ್ಲೀಲ ಮೆಸೇಜ್‌ಗಳು ಸರಿ ಇದೆಯಾ ಎಂದು ಪ್ರೇಮ್ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ದರ್ಶನ್ ಪರ ಪ್ರೇಮ್ ಬ್ಯಾಟಿಂಗ್ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here