ಬಳಗಾನೂರು ಕೋಮು ಸಾಮರಸ್ಯಕ್ಕೆ ಸಾಕ್ಷಿ

0
suresh chalavadi
Spread the love

ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಬಳಗಾನೂರ ಗ್ರಾಮದ ನಡೆದಾಡುವ ದೇವರೆಂದೇ ಪ್ರಸಿದ್ಧರಾದ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ೨೯ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಮುಸ್ಲಿಂ ಸಮುದಾಯದ ಗುರು-ಹಿರಿಯರು ಶ್ರೀ ಮಠದ ಜಾತ್ರೆಗೆ ಆಗಮಿಸಿದ ಭಕ್ತರ ಪ್ರಸಾದಕ್ಕೆ ಸಾವಿರಾರು ರೊಟ್ಟಿಯನ್ನು ಬಡಿದು ಶ್ರೀ ಮಠಕ್ಕೆ ನೀಡಿರುವುದು ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸುರೇಶ ವಾಯ್.ಚಲವಾದಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶರಣರು ನಡೆದಾಡಿದ ಸುಕ್ಷೇತ್ರ ಬಳಗಾನೂರ ಗ್ರಾಮದಲ್ಲಿ ಎಲ್ಲಾ ಸಮುದಾಯದ ಜನರು ಪರಸ್ಪರ ಸಹೋದರತ್ವದ ಭಾವನೆಯಿಂದ ಯಾವದೇ ಕೋಮು ಗಲಭೆಯಿಲ್ಲದೇ ಸೌಹಾರ್ದತೆಯಿಂದು ಬದುಕನ್ನು ಕಟ್ಟಿಕೊಂಡಿರುವದು ಸಂತೋಷಕರ ಸಂಗತಿ.

ಪ್ರತಿ ವರ್ಷ ಶಿವಶಾಂತವೀರ ಶರಣರು ಜಾತ್ರೆಯ ತಿಂಗಳ ಮೊದಲೇ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಸದ್ಭಾವನಾ ಯಾತ್ರೆ ಹಮ್ಮಿಕೊಂಡು ಸಾಮಾಜಿಕ ಜಾಗೃತಿ ಮೂಡಿಸುವದರ ಜೊತೆಗೆ ಸೌಹಾರ್ದತೆಯ ಬದುಕನ್ನು ಕಟ್ಟಿಕೊಂಡು ಜೀವಿಸಬೇಕೆಂಬ ಸಂದೇಶವನ್ನು ನೀಡುತ್ತಾರೆ.

ಶ್ರೀ ಶಿವಶಾಂತವೀರ ಶರಣರು ಹೀಗೆ ಹಲವಾರು ರೀತಿಯ ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿ ಕಾರ್ಯಗಳನ್ನು ಮಾಡುತ್ತ ಭಕ್ತ ಸಮೂಹದ ಹೃದಯಾಂತರಾಳದಲ್ಲಿ ನೆಲೆಯೂರಿ ನಮ್ಮ ಭಾಗದ ನಡೆದಾಡುವ ದೇವರೆಂದು ಖ್ಯಾತಿಯನ್ನು ಪಡೆದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here