ವಿಜಯಸಾಕ್ಷಿ ಸುದ್ದಿ, ರೋಣ : ಬಣಜಿಗ ಸಮುದಾಯದವರು ಬಸವಣ್ಣನ ಅನುವಾಯಿಗಳಾಗಿದ್ದು, ಬಣಜಿಗರಲ್ಲಿ ಜಾತಿ-ಧರ್ಮದ ತಾರತಮ್ಯವಿಲ್ಲ. ಎಲ್ಲರೂ ಒಂದೇ ಎಂದು ಸೌಹಾರ್ದತೆಯಿಂದ ಬಾಳುತ್ತಾರೆ ಎಂದು ಮೈಸೂರ ಮಠದ ವಿಜಯಮಹಾಂತ ಶ್ರೀಗಳು ಹೇಳಿದರು.
ಅವರು ಸೋಮವಾರ ಪಟ್ಟಣದ ಬಣಜಿಗ ಸಮುದಾಯದ ನೂತನ ಭವನ ಹಾಗೂ ಸಹಕಾರಿ ಸಂಘದ ಕಟ್ಟಡ ನಿರ್ಮಾಣದ ಭೂಮಿಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
12ನೇ ಶತಮಾನದಲ್ಲಿ ಬಸವಣ್ಣನವರ ಇಚ್ಛೆಯಂತೆ ಧಾರ್ಮಿಕ ಭಾವನೆಯಲ್ಲಿ ನಂಬಿಕೆಯನ್ನು ಹೊಂದಿರುವ ಬಣಜಿಗರು ದಾಸೋಹಿಗಳಾಗಿದ್ದಾರೆ. ವ್ಯಾಪಾರವೇ ತಮ್ಮ ಕಾಯಕ ಎಂದು ನಂಬಿಕೊಂಡು ತಮ್ಮ ದುಡಿಮೆಯಲ್ಲಿ ಭಗವಂತನನ್ನು ಕಾಣುತ್ತಾರೆ ಎಂದರು.
ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ ಮಾತನಾಡಿ, ಬಣಜಿಗರು ಶ್ರಮಜೀವಿಗಳು. ಸಮುದಾಯ ಭವನ ನಿರ್ಮಾಣದಿಂದ ಸಮಾಜ ಮತ್ತಷ್ಟು ಬೆಳೆದು ಸರ್ವ ಜನಾಂಗಕ್ಕೂ ಒಳಿತನ್ನು ಮಾಡಲಿ. ಅಲ್ಲದೆ ಸಮುದಾಯ ಭವನ ನಿರ್ಮಾಣದಿಂದ ಬಡವರಿಗೆ ಹೆಚ್ಚಿನ ಅನುಕೂಲವಾಗಲಿ ಎಂದ ಅವರು, ಸಮುದಾಯದವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಎಂದರು.
ಅಧ್ಯಕ್ಷತೆಯನ್ನು ಮುತ್ತಣ್ಣ ಸಂಗಳದ ವಹಿಸಿದ್ದರು. ವೀರಣ್ಣ ಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಭೂದಾನಿಗಳಾದ ಮಾತೋಶ್ರೀ ಗುರುಬಸ್ಸಮ್ಮ ಐಹೊಳ್ಳಿ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.
ಮುಪ್ಪಿನಬಸವಲಿಂಗ ಶ್ರೀಗಳು, ಗುರುಪಾದೇಶ್ವರ ಶ್ರೀಗಳು, ಬೂದೇಶ್ವರ ಶ್ರೀಗಳು, ಗಂಗಾಧರೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಐ.ಎಸ್. ಪಾಟೀಲ, ಸಂಗನಗೌಡ ಪಾಟೀಲ, ಸಂಗಪ್ಪ ಮೆಣಸಿನಕಾಯಿ, ಮುತ್ತಣ್ಣ ಕಡಗದ, ರವಿ ಸಂಗನಬಶೆಟ್ಟರ, ಆನಂದ ಚಂಗಳಿ, ಶಿವಪ್ಪ ಹಾಲಬಾವಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.