ಮಹಿಳೆಗೆ ಕಿರುಕುಳ ಆರೋಪ: ಬೆಂಗಳೂರು ವಿಶ್ವವಿದ್ಯಾಲಯದ ನಿರ್ದೇಶಕ ಅರೆಸ್ಟ್​!

0
Spread the love

ಬೆಂಗಳೂರು: ಮಹಿಳೆಗೆ ಕಿರುಕುಳ ನೀಡಿದ ಆರೋಪದ ಹಿನ್ನಲೆ ಬೆಂಗಳೂರು ವಿಶ್ವವಿದ್ಯಾಲಯದ ಪ್ರೊಫೆಸರ್​​ ಮೈಲಾರಪ್ಪನನ್ನು ಬಂಧಿಸಲಾಗಿದೆ. ಮಹಿಳೆಯೋರ್ವರು ನೀಡಿದ ದೂರಿನ ಮೇರೆಗೆ ಬಸವೇಶ್ವರ ನಗರ ಪೊಲೀಸ್ರಿಂದ ಅರೆಸ್ಟ್‌ ಮಾಡಲಾಗಿದೆ. ಮೈಲಾರಪ್ಪ 2022ರ ಬೆಂಗಳೂರು ವಿಶ್ವ ವಿದ್ಯಾಲಯದ ಉಪ ಕುಲಪತಿಯಾಗಿದ್ದರು.

Advertisement

ಈ ವೇಳೆ ಮೈಲಾರಪ್ಪನ ಜೊತೆ ಮಹಿಳೆ ಕೆಲಸ ಮಾಡ್ತಿದ್ದರು. ಪರಿಚಯದ ಸಂದರ್ಭದಿಂದಲೇ ಅವರಿಂದ ಲೈಂಗಿಕ ಕಿರುಕುಳ ಆರಂಭವಾಗಿತ್ತು ಎಂದು ದೂರಿನಲ್ಲಿ ಹೇಳಿದ್ದಾರೆ. 2022ರಿಂದ 2024ರವರೆಗೆ ಈ ಕಿರುಕುಳ ಮುಂದುವರಿದಿದೆ. ಮಹಿಳೆಯು ಈ ವಿಷಯವನ್ನು ಮೊದಲು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ತಿಳಿಸಿದ್ದರು. ಅಲ್ಲಿ ಲೈಂಗಿಕ ಕಿರುಕುಳದ ಆರೋಪದಡಿ ಪ್ರಕರಣ ದಾಖಲಾಗಿತ್ತು.

ಆದರೆ, ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಪ್ಪನವರು ಮಹಿಳೆಗೆ ಬೆದರಿಕೆ ನೀಡುತ್ತಿದ್ದಾರೆ ಎಂದು ಹೊಸ ದೂರು ನೀಡಲಾಗಿದೆ. ದೂರಿನ ವಿವರಗಳ ಪ್ರಕಾರ, ಮೈಲಾರಪ್ಪನವರು ಮಹಿಳೆಯ ಮನೆಯನ್ನು ತಮ್ಮ ಹೆಸರಿಗೆ ಬರೆಯುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದಿದ್ದರೆ ತೀವ್ರ ಪರಿಣಾಮಗಳು ಬರಲಿವೆ ಎಂದು ಬೆದರಿಸಿದ್ದಾರೆ. ಈ ಬೆದರಿಕೆಯು ಮಹಿಳೆಯಲ್ಲಿ ಭಯ ಮೂಡಿಸಿದ್ದು, ಅವರು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರ ಮೇರೆಗೆ ಪೊಲೀಸ್ ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಮೈಲಾರಪ್ಪನವರನ್ನು ಬಂಧಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here