ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿರುವ ರೋಹನ್ ಜಗದೀಶರನ್ನು ಗದಗ ತಾಲೂಕಿನ ಲಂಬಾಣಿ ಬಂಜಾರ ಸಮಾಜದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
Advertisement
ಬಂಜಾರ ಸಮಾಜದ ಮುಖಂಡರಾದ ಸೋಮು ಲಮಾಣಿ ಮಾತನಾಡಿ, ಗದಗ ತಾಲೂಕಿನ ಎಲ್ಲಾ ತಾಂಡಾಗಳ ಸಮಸ್ಯೆಗಳನ್ನು ಪರಿಹರಿಸಲು ತ್ವರಿತ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ರಘುವೀರ ಲಮಾಣಿ, ಹಾಮಜಪ್ಪ ಲಮಾಣಿ, ಠಾಕುರ ಜಾಧವ, ಸೋಮು ಲಮಾಣಿ, ಶ್ರೀಕಾಂತ್ ಪೂಜಾರ, ತಾಲಪ್ಪ ಜಾಧವ, ಲೋಕೇಶ್ ಕಟ್ಟಿಮನಿ, ಅನಿಲ ಕಾರಭಾರಿ, ದೇವು ಪೂಜಾರ, ಶಶಿ ಹಿರೇಮಠ, ಸಂತೋಷ ಲಮಾಣಿ, ಈಶ್ವರ ಲಮಾಣಿ, ತುಕಾರಾಮ ಲಮಾಣಿ, ಆಕಾಶ ಲಮಾಣಿ ಮುಂತಾದವರಿದ್ದರು.