ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಕಳಸಾಪೂರ ಗ್ರಾಮದ ಬಸವ ಕೇಂದ್ರದಲ್ಲಿ ಷಟಸ್ಥಲ್ ಧ್ವಜಗೀತೆಯೊಂದಿಗೆ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮವನ್ನು ಪುಷ್ಪವೃಷ್ಠಿ ಮೂಲಕ ಗ್ರಾ.ಪಂ ಸದಸ್ಯ ಕಿರಣಕುಮಾರ ಕೋರ್ಪಡೆ ನೆರವೇರಿಸಿದರು.
ಬಸವ ಕೇಂದ್ರದ ಕಾರ್ಯಾಧ್ಯಕ್ಷ, ಕನ್ನಡಾಭಿಮಾನಿ, ಮಲ್ಲಿಕಾರ್ಜುನ ಖಂಡಮ್ಮನವರ ತಮ್ಮ ದ್ವಿಚಕ್ರ ವಾಹನದೊಂದಿಗೆ ಸಂಚರಿಸಿ, ವಿಶ್ವಗುರು ಬಸವಣ್ಣನವರ ವಚನಗಳ ಭಿತ್ತಿ ಪತ್ರಗಳನ್ನು ಗದಗ ನಗರದ ಮುಳಗುಂದ ನಾಕಾ, ಹುಡ್ಕೋ ಕಾಲೋನಿ, ಹುಯಿಳಗೋಳ ನಾರಾಯಣರಾವ ವೃತ್ತ, ಪಂ. ಪುಟ್ಟರಾಜ ಗವಾಯಿಗಳ ವೃತ್ತ, ಗಾಂಧಿ ಸರ್ಕಲ್‌ಗಳಲ್ಲಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಅನಸೂಯಾ ಖಂಡಮ್ಮನವರ, ಜಯಶ್ರೀ ಖಂಡಮ್ಮನವರ, ಶಿಲ್ಪಾ ಖಂಡಮ್ಮನವರ, ಸವಿತಾ ಗಂಗಾಧರ ಖಂಡಮ್ಮನವರ, ಬಾಳನಗೌಡ ಪಾಟೀಲ, ರಾಮಪ್ಪ ಮಹಾದೇವಪ್ಪ ಅಣ್ಣಿಗೇರಿ, ಸಂತೋಷ ನಾಯ್ಕರ, ಕೊಟ್ರೇಶ ಓಲಿ, ಪಿ.ಡಿ.ಓ. ಕಳಸಾಪೂರ, ಬಸವರಾಜ ಹಗೇದಾಳ, ಗಣೇಶ ಚನ್ನಪ್ಪ ಚವ್ಹಾಣ, ಶರಣಪ್ಪ ಹುಯಿಲಗೋಳ, ಇಸ್ಮಾಯಿಲ್ ಜಾಲಿಹಾಳ, ಹುಚ್ಚಪ್ಪ ಸಣ್ಣಕ್ಕಿ, ಬಸವರಾಜ ಹೂಗಾರ, ಬಸವ ಕೇಂದ್ರದ ಎಲ್ಲ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.


