‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮ ಅಂತಿಮ ಘಟ್ಟ ತಲುಪಿದೆ. ಅದರಂತೆ ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಕಟ್ಟ ಕಡೆಯ ಕ್ಯಾಪ್ಟನ್ ಕಮ್ ಅಲ್ಟಿಮೇಟ್ ಕ್ಯಾಪ್ಟನ್ ಆಗಿರುವ ಹನುಮಂತ ಲಮಾಣಿಗೆ ‘ಬಿಗ್ ಬಾಸ್’ ವಿಶೇಷ ಅಧಿಕಾರವನ್ನ ನೀಡಿದರು. ಹನುಮಂತನ ಅಚ್ಚರಿಯ ನಿರ್ಧಾರದಿಂದ ಮೋಕ್ಷಿತಾ ನಾಮಿನೇಷನ್ ಹಾಟ್ ಸೀಟ್‌ನಿಂದ ಬಚಾವ್ ಆಗಿದ್ದು, ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ.
ಕ್ಯಾಪ್ಟನ್ ಹನುಮಂತನಿಗೆ ಬಿಗ್ ಬಾಸ್ ಒಂದು ವಿಶೇಷ ಅಧಿಕಾರ ನೀಡಲಾಯಿತು. ಆಗ ನಾಮಿನೇಟ್ ಆದ ಒಬ್ಬರನ್ನು ಸೇಫ್ ಮಾಡಲು ಅವರಿಗೆ ಅವಕಾಶ ನೀಡಲಾಯಿತು. ಹನುಮಂತ ಅವರು ಗೆಳಯ ಧನರಾಜ್ ಹೆಸರು ಹೇಳಬಹುದು ಎಂದು ಅನೇಕರು ಊಹಿಸಿರಬಹುದು. ಆದರೆ ಆಗಿದ್ದೇ ಬೇರೆ. ಹನುಮಂತ ಅವರು ಮೋಕ್ಷಿತಾ ಪರವಾಗಿ ಬ್ಯಾಟ್ ಬೀಸಿದರು. ಮೋಕ್ಷಿತಾ ಚೆನ್ನಾಗಿ ಆಟ ಆಡುತ್ತಿದ್ದಾರೆ. ಹಾಡು ಹೇಳಿ ಮನರಂಜನೆ ನೀಡುತ್ತಾರೆ. ಒಳ್ಳೆಯ ಮನಸ್ಸಿನ ವ್ಯಕ್ತಿ. ಕಲ್ಮಶ ಇಲ್ಲ. ತಪ್ಪನ್ನು ಒಪ್ಪಿಕೊಳ್ಳುತ್ತಾರೆ ಎಂಬ ಕಾರಣವನ್ನು ನೀಡಿ ಮೋಕ್ಷಿತಾನ ನಾಮಿನೇಷನ್‌ನಿಂದ ಹನುಮಂತ ಬಚಾವ್ ಮಾಡಿದ್ದಾರೆ.
ಒಟ್ಟಾರೆಯಾಗಿ ಮೋಕ್ಷಿತಾ ಅವರಿಗೆ ಈ ಚಾನ್ಸ್ ಸಿಕ್ಕಿದ್ದು ಹನುಮಂತನ ಕೃಪೆಯಿಂದಲೇ ಎಂಬುದು ನಿಜ. ಹನುಮಂತ ತೆಗೆದುಕೊಂಡ ಈ ನಿರ್ಧಾರವನ್ನು ಬಹುತೇಕ ಎಲ್ಲರೂ ಒಪ್ಪಿಕೊಂಡರು. ಇದರಿಂದ ಮೋಕ್ಷಿತಾಗೂ ಖುಷಿಯಾಯ್ತು. ನಾಮಿನೇಷನ್‌ನಿಂದ ಬಚಾವ್ ಮಾಡಿದ ಹನುಮಂತಗೆ ಧನ್ಯವಾದ ತಿಳಿಸಿದರು.