HomeBengaluru Newsಬೆಂಗಳೂರಲ್ಲಿ ಮತ್ತೆ ವರುಣನ ಅಬ್ಬರ; ಹಲವೆಡೆ ಜಲಾವೃತ, ವಾಹನ ಸವಾರರು ಹೈರಾಣು!

ಬೆಂಗಳೂರಲ್ಲಿ ಮತ್ತೆ ವರುಣನ ಅಬ್ಬರ; ಹಲವೆಡೆ ಜಲಾವೃತ, ವಾಹನ ಸವಾರರು ಹೈರಾಣು!

For Dai;y Updates Join Our whatsapp Group

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಬುಧವಾರ ಸಂಜೆ ಧಾರಾಕಾರ ಮಳೆಯಾಗಿದ್ದು, ನಗರದ ಹಲವು ರಸ್ತೆಗಳು ಜಲಾವೃತಗೊಂಡಿವೆ.

ಬೆಳಗ್ಗೆಯಿಂದ ಮೋಡಕವಿದ ವಾತಾವರಣವಿದ್ದರೂ ಸಂಜೆ ವೇಳೆಗೆ ಮಳೆ ಅಬ್ಬರಿಸಿದೆ. ಭಾರಿ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.

ಧಾರಾಕಾರ ಮಳೆಯಿಂದ ಪೀಣ್ಯ ಮೇಲ್ಸೇತುವೆಯಲ್ಲಿ ಭಾರಿ ಪ್ರಮಾಣದ ನೀರು ನಿಂತಿದ್ದು, ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗಿದೆ. ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಬೆಂಗಳೂರು ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಇನ್ನು ಜೋರು ಗಾಳಿ ಮಳೆಗೆ ವಿಜ್ಞಾನ ನಗರ ಬಳಿ ಬೃಹತ್ ಮರವೊಂದು ಧರೆಗುರುಳಿದೆ. ಮರ ಬಿದ್ದ ಪರಿಣಾಮ ಕಗ್ಗದಾಸಪುರ ಕಡೆಗೆ ತೆರಳುವ ಮಾರ್ಗದಲ್ಲಿ ವಾಹನ ಸಂಚಾರ ಮಂದಗತಿಯಲ್ಲಿದೆ.

ಹೆಬ್ಬಾಳ ರಿಂಗ್ ರಸ್ತೆಯಲ್ಲೂ ಟ್ರಾಫಿಕ್ ಜಾಮ್ ಉಂಟಾಗಿದೆ. ಯೋಗೀಶ್ವರನಗರ ಬಳಿ ಮಳೆ ನೀರು ರಸ್ತೆಯಲ್ಲಿ ಶೇಖರಣೆಯಾಗಿದ್ದು, ಹೆಬ್ಬಾಳ ರಿಂಗ್ ರಸ್ತೆ ಕಡೆಗೆ ವಾಹನಗಳು ಸಾಲುಗಟ್ಟಿ ನಿಧಾನವಾಗಿ ಸಾಗುತ್ತಿವೆ.

ನಗರದ ಹಲವು ಅಂಡರ್‌ಪಾಸ್‌ಗಳು ಹಾಗೂ ಫ್ಲೈಓವರ್‌ಗಳಲ್ಲೂ ನೀರು ನಿಂತಿದೆ. ಯಲಹಂಕದ ವಿದ್ಯಾಶಿಲ್ಪ ರೈಲ್ವೆ ಕೆಳಸೇತುವೆ, ರಾಷ್ಟ್ರೋತ್ಥಾನ ಮೇಲ್ಸೇತುವೆ, ಚೌಡಪ್ಪ ಲೇಔಟ್ ಹಾಗೂ ಥಣಿಸಂದ್ರ ರಸ್ತೆಗಳಲ್ಲಿ ಮಳೆ ನೀರು ತುಂಬಿಕೊಂಡಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಇದೇ ವೇಳೆ ವಿದ್ಯಾಸೌಧ ಶಾಲೆ ಬಳಿ ಬೃಹತ್ ಮರವೊಂದು ಧರೆಗುರುಳಿದೆ. ರೇನ್‌ಬೋ ಆಸ್ಪತ್ರೆಯಿಂದ ಕಾರ್ತಿಕ್ ನಗರ, ಯಲಹಂಕ ಬಿಎಸ್‌ಎಫ್‌ನಿಂದ ವಿಮಾನ ನಿಲ್ದಾಣ ರಸ್ತೆ ಹಾಗೂ ಮಹದೇವಪುರದಿಂದ ಲೋರಿ ಜಂಕ್ಷನ್‌ವರೆಗೂ ಹಲವು ಕಡೆ ರಸ್ತೆಯಲ್ಲಿ ನೀರು ನಿಂತಿದೆ.

ಭಾರಿ ಮಳೆ ಹಾಗೂ ಜಲಾವೃತದಿಂದಾಗಿ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನಗಳ ವೇಗ ಕುಂಠಿತಗೊಂಡಿದ್ದು, ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img