ವಿಜಯಪುರ:- ಉಗ್ರಗಾಮಿಗಳಿಗೆ ಬೆಂಗಳೂರು ಸುರಕ್ಷಿತ ಸ್ಥಳವಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಈ ಸಂಬಂಧ X ಮಾಡಿರುವ ಅವರು, ಬೆಂಗಳೂರು ಅಪರಾಧಿಗಳಿಗೆ ಸುರಕ್ಷಿತ ತಾಣವಾಗಿದೆ. ನಗರದಲ್ಲಿ ಸ್ಲೀಪರ್ ಸೆಲ್‌ಗಳು ಸಕ್ರಿಯವಾಗಿವೆ ಎಂಬ ಅಂಶವನ್ನು ಎನ್‌ಐಎ ಅಧಿಕಾರಿಗಳ ಇಂದಿನ ದಾಳಿಯಿಂದ ಸಾಬೀತುಪಡಿಸಲಾಗಿದೆ.
Advertisement
ಮುಸ್ಲಿಂ ಉಗ್ರಗಾಮಿಗಳು ರೂಪಿಸಿರುವ ಯಾವುದೇ ಕೆಟ್ಟ ಯೋಜನೆಗಳನ್ನು ವಿಫಲಗೊಳಿಸಲು ಸರ್ಕಾರ ಮತ್ತು ಪೋಲೀಸರು ತಮ್ಮ ಕಣ್ಗಾವಲು ಹೆಚ್ಚಿಸುವುದು ಮತ್ತು ತಮ್ಮ ಗುಪ್ತಚರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಯತ್ನಾಳ್ ಬರೆದುಕೊಂಡಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಇಂದು ಕರ್ನಾಟಕ ಸೇರಿದಂತೆ ದೇಶದ ವಿವಿಧ ಸ್ಥಳಗಳಲ್ಲಿ ದಾಳಿ ಮಾಡಿದ್ದರು. ಬೆಂಗಳೂರಿನಲ್ಲೂ ನಡೆದ ದಾಳಿ ವೇಳೆ ಶಂಕಿತ ಉಗ್ರ ಅಲಿ ಅಬ್ಬಾಸ್ ಎಂಬಾತನನ್ನು ಬಂಧಿಸಲಾಗಿದೆ.