ಬೆಂಗಳೂರು:- ವಿದ್ಯುತ್ ತಂತಿ ತುಳಿದು ಕುರಿಗಾಯಿ ಸಾವನ್ನಪ್ಪಿದ ಘಟನೆ ನಗರದ ಹೊರವಲಯದಲ್ಲಿ ನಡೆದಿದ್ದು, ಬೆಸ್ಕಾಂ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
65 ವರ್ಷದ ಶಿವಣ್ಣ ಸಾವನ್ನಪ್ಪಿದ ವ್ಯಕ್ತಿ. ಬನಶಂಕರಿ 6ನೇ ಹಂತ, ಮೂರನೇ ಬ್ಲಾಕ್, ಚಿಕ್ಕೇಗೌಡನ ಪಾಳ್ಯದಲ್ಲಿ ಘಟನೆ ಜರುಗಿದೆ. ನಿನ್ನೆ ಸಂಜೆ ಕುರಿಗೆ ಸೊಪ್ಪು ಕತ್ತರಿಸಲು ತೆರಳಿದ್ದ ವೇಳೆ ಘಟನೆ ಜರುಗಿದೆ.
ಕುರಿ ಮೇಯಿಸಲು ತೆರಳಿದ್ದ ಶಿವಣ್ಣ ಮನೆಗೆ ಬಂದಿರಲಿಲ್ಲ. ಹೀಗಾಗಿ ರಾತ್ರಿ ಇಡೀ ಕುಟುಂಬಸ್ಥರು ಹುಡುಕಾಡಿದ್ದರು. ಆದರೆ ಇಂದು ಬೆಳಗ್ಗೆ ಕುರಿಗಾಯಿ ಶಿವಣ್ಣ ಕುರಿಮೇಯಿಸುವ ಜಾಗದಲ್ಲಿ ಪತ್ತೆಯಾಗಿದ್ದಾರೆ. ಬೆಸ್ಕಾಂ ಅಧಿಕಾರಿಗಳಿಗೆ ತಂತಿಗಳನ್ನು ಸರಿಪಡಿಸುವಂತೆ ಎರಡು ತಿಂಗಳಿನಿಂದ ಸ್ಥಳೀಯರು ದೂರು ನೀಡಿದ್ದರು. ಹಲವು ಬಾರಿ ಕ್ರಮಕ್ಕೆ ಆಗ್ರಹಿಸಿ ಬೆಸ್ಕಾಂಗೆ ದೂರು ನೀಡಿದ್ರು ಪ್ರಯೋಜನವಾಗಿರಲಿಲ್ಲ. ಹೀಗಾಗಿ ಬೆಸ್ಕಾಂ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ತಲಘಟ್ಟಪುರ ಪೊಲೀಸರು, ಬೆಸ್ಕಾಂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ.
ಮರಣೋತ್ತರ ಪರೀಕ್ಷೆಗೆ ಮೃತದೇಹ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.