ಕೊಡಗು: ನಿನ್ನೆ ಸುರಿದ ಮಳೆಯಿಂದಾಗಿ ಕುಶಾಲನಗರದ ಸಾಯಿ ಬಡಾವಣೆ,ಕುವೆಂಪು ಬಡಾವಣೆಯ ನೂರಾರು ಮನೆಗಳು ಜಲಾವೃತವಾಗಿದ್ದು ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ . ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿ ಸಂತ್ರಸ್ತ ದೈರ್ಯ ತುಂಬಿ ಕಾಳಜಿ ಕೇಂದ್ರಕ್ಕೆ,ಅಥವಾ ಗಂಜಿ ಕೇಂದ್ರಕ್ಕೆ ಕಳುಹಿಸಲಾಯಿತು.
ಅದಲ್ಲದೆ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 2.5 ಲಕ್ಷ ಜೊತೆಗೆ ಹೊಸ ಮನೆ ಕಟ್ಟಿಸಿ ಕೊಡುವ ಕುರಿತು ಈ ಸಂಬಂಧ ಶೀಘ್ರವೇ ನಾವು ಆದೇಶವನ್ನು ಹೊರಡಿಸುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿಕೆ ನೀಡಿದರು. ಹಾಗೂ ಅಲ್ಲಿದ್ದ ಸಂತ್ರಸ್ತರಿಗೆ ಪೂರ್ಣ ಪ್ರಮಾಣದಲ್ಲಿ ಭರವಸೆಯನ್ನು ನೀಡಿದರು.
ಇನ್ನೂ .ಡಿಯವರು ಬಂದು, ತಪ್ಪು ಮಾಡುವವರಿಗೆ ರಕ್ಷಣೆ ಕೊಡ್ತೀವಿ. ನೀವು ಸಿಎಂ ಮೇಲೆ ಹೇಳಿಕೆ ಕೊಡಿ ಎನ್ನುತ್ತಾರೆ. ತಪ್ಪು ಮಾಡಿರುವವರನ್ನು ರಕ್ಷಣೆ ಮಾಡಿ, ಹಗರಣ ಮುಚ್ಚಿ ಹಾಕಿ, ಸಿಎಂ ತಲೆಗೆ ಕಟ್ಟಬೇಕು ಎನ್ನುವುದು ಅವರ ಉದ್ದೇಶ’ ಎಂದು ಆರೋಪಿಸಿದರು.