ವಿಜಯಸಾಕ್ಷಿ ಸುದ್ದಿ, ಗದಗ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಇದರ ವತಿಯಿಂದ ಡಿಸೆಂಬರ್ 2024-25ನೇ ಸಾಲಿನಲ್ಲಿ ನಡೆದ ನಾಲ್ಕನೇ ಸೆಮಿಸ್ಟರ್‌ನ ಬಿಎಸ್‌ಸಿ ನರ್ಸಿಂಗ್ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಇದರಲ್ಲಿ ಆರ್‌ಎಮ್‌ಎಸ್‌ಎಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ.
ವೀರಣ್ಣ ಚಿಗೊಳ್ಳಿ 218 (72.66%) ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ, ರಂಜನಾ ರಾಥೋಡ್ 217(72.3%) ದ್ವಿತೀಯ ಸ್ಥಾನ, ಸವಿತಾ 216(72 %) ತೃತೀಯ ಸ್ಥಾನ ಪಡೆದು ಉತ್ತೀರ್ಣರಾಗಿದ್ದಾರೆ. ಒಟ್ಟು 25 ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳು ಗ್ರೇಡ್ ಬಿ+ ಪಡೆದಿದ್ದು, ಇನ್ನುಳಿದ ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ಮೂಲಕ ಉತ್ತಮ ಫಲಿತಾಂಶ ನೀಡಿ ಒಟ್ಟು ಶೇ.76ರಷ್ಟು ಫಲಿತಾಂಶ ಪಡೆದು ತೇರ್ಗಡೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಅಧ್ಯಕ್ಷರಾದ ಡಾ. ಎಸ್.ಆರ್. ನಾಗನೂರ, ಗೌರವ ಕಾರ್ಯದರ್ಶಿ ಡಾ. ವೇಮನ್ ಸಾವಕಾರ, ಕಾಲೇಜಿನ ಪ್ರಾಂಶುಪಾಲರಾದ ಬಸಯ್ಯ ಹಿರೇಮಠ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.