ವಿಜಯಸಾಕ್ಷಿ ಸುದ್ದಿ, ಮುಳಗುಂದ: ಬಿತ್ತನೆಗೂ ಮೊದಲು ಸರಿಯಾಗಿ ಬೀಜೋಪಚಾರ ಮಾಡುವುದರಿಂದ ಬೀಜದಿಂದ ಹಾಗೂ ಮಣ್ಣಿನಿಂದ ಬರುವ ರೋಗ ತಡೆಗಟ್ಟಲು ಸಾಧ್ಯ ಎಂದು ಕೃಷಿ ವಿಜ್ಞಾನಿ ಡಾ. ಕಲಾವತಿ ಕಾಂಬಳೆ ಹೇಳಿದರು.
ಅವರು ಪಟ್ಟಣ ಸಮೀಪದ ಅಂತೂರ ಬೆಂತೂರ ಗ್ರಾಮದ ರೈತರ ಜಮಿನುಗಳಿಗೆ ಭೇಟಿ ನೀಡಿ ಕಡಲೆ, ಗೋಧಿ, ಕುಸುಬೆ, ಜೋಳ ಬೆಳೆಗಳಲ್ಲಿ ಕಂಡುಬರುವ ಕೀಟ ಬಾಧೆ ಕುರಿತು ಮಾತನಾಡಿ, ಕಡಲೆ ಬೆಳೆಗಳಲ್ಲಿ ಸಿಡಿರೋಗ ನಿಯಂತ್ರಣಕ್ಕೆ ಟ್ರೈಕೋಡರ್ಮಾ ಬೀಜೋಪಚಾರ ಮಾಡುವುದರಿಂದ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗೆ ಸಮೀಪದ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಎಂದರು.
ಡಾ. ಮೋಟಗಿ ಮಾಹಿತಿ ನೀಡಿ, ಕುಸುಬೆ ಬೆಳೆಯಲ್ಲಿ ಸೀರು ಹಾಗೂ ಹೇನು ನಿಯಂತ್ರಣಕ್ಕೆ ಲ್ಯಾಂಬಡೋ ಸೈಲೋತ್ರಿ ಸಿಂಪರಣೆ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಗೋಧಿಯಲ್ಲಿ ನೈಟ್ರೋಜನ್ ಕೊರತೆ ಉಂಟಾದಲ್ಲಿ ನ್ಯಾನೋ ಯೂರಿಯಾ ಸಿಂಪರಣೆ ಮಾಡುವುದರಿಂದ ಉತ್ತಮ ಫಸಲು ಪಡೆಯಲು ಸಾಧ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಸಂಗಪ್ಪಶೆಟ್ಟಿ ಬಾಳಕುಂದಿ, ಸಹಾಯಕ ಕೃಷಿ ಅಧಿಕಾರಿ ರಾಜೇಶ್ವರಿ ಚಿನಿವಾಲರ, ಮಂಜುನಾಥ ಸೂಡಿ ಹಾಗೂ ಅಂತೂರ ಬೆಂತೂರ ಗ್ರಾಮದ ರೈತ ಬಾಂಧವರು ಇದ್ದರು.



