ಬಿಎಸ್‌ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ಭಾಗ್ಯ ಗೌಡ್ರಗೆ ಸನ್ಮಾನ

0
Bhagya Gowdra a student of BSS College was honored
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ರಾಜ್ಯ ಮಟ್ಟದ ಯುವಚೇತನ ವ್ಯಕ್ತಿತ್ವ ವಿಕಸನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಭಾಗ್ಯ ಗೌಡ್ರ ಅವರಿಗೆ ಪಟ್ಟಣದ ಬಿಎಸ್‌ಎಸ್ ಕಾಲೇಜಿನಲ್ಲಿ ಶನಿವಾರ ಸನ್ಮಾನಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವಿಭಾಗದ ಸಂಚಾಲಕ ಸಿದ್ದೇಶ ಮಾತನಾಡಿ, ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಕೇಂದ್ರದವರು ನಡೆಸಿದ ರಾಜ್ಯಮಟ್ಟದ ಯುವಚೇತನ ಪರೀಕ್ಷೆಯಲ್ಲಿ ರಾಜ್ಯದ ಒಟ್ಟು 38 ಕಾಲೇಜುಗಳ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಸ್ತುಬದ್ಧ ಅಧ್ಯಯನ ಹಾಗೂ ವ್ಯಕ್ತಿತ್ವ ವಿಕಸನದ ವಿಸ್ತೃತ ಅಧ್ಯಯನವು ರಾಜ್ಯದ 3 ಸಾವಿರ ಪರೀಕ್ಷಾರ್ಥಿಗಳು ಹಾಜರಾದ ಪರೀಕ್ಷೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿನಿ ಭಾಗ್ಯ ಗೌಡ್ರ ಪ್ರಥಮ ಸ್ಥಾನ ಪಡೆದಿದ್ದು ಖುಷಿ ತಂದಿದೆ ಎಂದರು.

ಕಾಲೇಜಿನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿನಿ ಭಾಗ್ಯ ಗೌಡ್ರ ಅವರಿಗೆ ವಿವೇಕಾನಂದ ಕೇಂದ್ರದ ಕಾರ್ಯಕರ್ತ ಅರವಿಂದ ಅವರು ಪ್ರಶಸ್ತಿ ಪತ್ರ ಮತ್ತು 5 ಸಾವಿರ ರೂ ನಗದಿನ ಚೆಕ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಆಯ್‌ಕ್ಯೂಎಸಿ ಸಂಚಾಲಕಿ ಸರಸ್ವತಿ, ಕನ್ನಡ ವಿಭಾಗದ ಮುಖ್ಯಸ್ಥೆ ಜೀವಿತ, ಉಪನ್ಯಾಸಕರಾದ ಡಾ.ಮಂಜುನಾಥ ಸುಣಗಾರ, ಯಮನಪ್ಪ ಮೇಗೂರು ಶರಣಪ್ಪ ರೋಣದ ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here