ವಿಜಯಸಾಕ್ಷಿ ಸುದ್ದಿ, ಗದಗ : ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದ ಸಭಾಪತಿ ಬಸವರಾಜ ಹೊರಟ್ಟಿಯವರು ನಾಡಿಗೆ ಸಾಕಷ್ಟು ಜನಪರ ಸೇವೆಯನ್ನು ಸಲ್ಲಿಸಿದ್ದಾರೆ. ವಿಶೇಷವಾಗಿ ಗದಗ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುವ ಮೂಲಕ ಪ್ರದೇಶಾಭಿವೃದ್ಧಿ ಅನುದಾನವನ್ನು ನೀಡಿದ್ದಾರೆ. ಹೀಗಾಗಿ ಅವರ ಸೇವೆಯನ್ನು ಗದಗ ಜನತೆ ಸದಾ ಸ್ಮರಿಸುತ್ತಾರೆ ಎಂದು ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ ಹೇಳಿದರು.
ಅವರು ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಇಲ್ಲಿನ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ನಗರಸಭೆಯ ಅನುದಾನದ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹೈಮಾಸ್ಟ್ ಲೈಟ್ ಮತ್ತು ಪೇವರ್ಸ್ ಜೋಡಣೆ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ತೋಟೋಸಾ ಬಾಂಡಗೆ, ಎಮ್.ಆರ್. ರಾಜೋಳಿ, ಪಿ.ಆರ್. ಇನಾಮದಾರ, ಆರ್.ಎಂ. ಕುಬೇರ, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎಂ. ಅಗಡಿ, ಅಮರನಾಥ ಗಡಗಿ, ರವಿ ನರೇಗಲ್ಲ, ವಂದನಾ ವೆರ್ಣೇಕರ್, ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಅಣ್ಣಿಗೇರಿ, ಶಂಕ್ರಮ್ಮ ಆರ್.ಹಣಮಗೌಡ್ರು, ಸಂಜೀವಿನಿ ಜಿ.ಕೂಲಗುಡಿ, ಎಂ.ಐ. ಶಿವನಗೌಡರ, ಮಂಜುಳಾ ಪಿ.ಸಾಮ್ರಾಣಿ, ಶಶಿಕಲಾ ಬಿ.ಗುಳೇದವರ, ಸುಮಂಗಲ ಎಂ.ಪತ್ತಾರ್, ಶೋಭಾ ಎಸ್.ಗಾಳಿ, ಶಾರದಾ ಎ.ಬಾಣದ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು.ಕುಷ್ಟಗಿ, ಗಂಗಾ ಎಂ.ಅಳವಂಡಿ, ಪದ್ಮಾ ವಿ.ದಾಸರ್, ಗುತ್ತಿಗೆದಾರ ವಾಸಿಂ ಕುನ್ನಿಭಾವಿ, ಲಕ್ಷ್ಮಮ್ಮ ಮಾಳೋತ್ತರ್ ಮುಂತಾದವರು ಉಪಸ್ಥಿತರಿದ್ದರು.
ಡಾ.ಬಸವರಾಜ ಧಾರವಾಡ ಮಾತನಾಡಿ, ಈ ಶಾಲೆಯಲ್ಲಿದ್ದ ಎಲ್ಲ ಕೊರತೆಗಳನ್ನು ನೀಗಿಸಿ ಒಂದು ಮಾದರಿ ಶಾಲೆಯನ್ನಾಗಿ ನಿರ್ಮಿಸುವಲ್ಲಿ ಬಸವರಾಜ ಹೊರಟ್ಟಿಯವರ ಸಹಕಾರದ ಜೊತೆಗೆ ವಿವಿಧ ಜನಪ್ರತಿನಿಧಿಗಳು, ದಾನಿಗಳು, ಜಿಲ್ಲಾಡಳಿತ, ನಗರಸಭೆಯವರು ಕೈಜೋಡಿಸಿದ್ದಾರೆ. ಅವರ ಸೇವೆಯನ್ನು ಎಂದೂ ಯಾರೂ ಮರೆಯಲಾಗದು. ಈ ಶಾಲೆ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿಯೇ ಒಂದು ಮಾದರಿ ಶಾಲೆಯಾಗಿ ನಿರ್ಮಾಣಗೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ. ಈ ಶಾಲೆ ಅಭಿವೃದ್ಧಿಗೆ ವಿಶೇಷವಾಗಿ ಕೈಜೋಡಿಸಿದ ಹಿಂದಿನ ಜಿಲ್ಲಾಧಿಕಾರಿಗಳಾದ ವೈಶಾಲಿ ಎಂ.ಎಲ್. ಅವರ ಸೇವೆಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದರು.