ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ 9 ವರ್ಷದ ಬಾಲಕಿ, ಭರತನಾಟ್ಯ ಕಲಾವಿದೆ ತೇಜೋಮಯಿ ಗದ್ದಿ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಭರತನಾಟ್ಯದಲ್ಲಿ ಸಾಧನೆ ಮಾಡಿ ರಾಜ್ಯಮಟ್ಟದ `ನೂಪುರ ನಾದ’ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.
Advertisement
ಇತ್ತೀಚೆಗೆ ಬೆಂಗಳೂರಿನ ವಿಜಯನಗರದಲ್ಲಿರುವ ಸಂಜೀವಿನಿ ಕಲಾ ಸಂಸ್ಥೆ ನಡೆಸಿಕೊಟ್ಟ ನೃತ್ಯ ತರಂಗ ಡ್ಯಾನ್ಸ್ ಫೆಸ್ಟಿವಲ್‌ನಲ್ಲಿ ತೇಜೋಮಯಿ ಗದ್ದಿ ಅವರಿಗೆ ನೂಪುರ ನಾದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷೆ ತನುಜಾರಾಜ ಅವರು ಪ್ರಶಸ್ತಿ ನೀಡಿ, ಚಿಕ್ಕ ವಯಸ್ಸಿನಲ್ಲಿ ಅದ್ಭುತ ಪ್ರತಿಭೆ ಹೊಂದಿರುವ ಇವಳು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದರು.
ಇವಳಿಗೆ ಭರತನಾಟ್ಯ ಕಲಿಸಿದ ನೇತ್ರಾವತಿ ಮಂಜುನಾಥ ಸೇರಿದಂತೆ ಪಟ್ಟಣದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.