ಕುಡಿದ ಮತ್ತಿನಲ್ಲಿ ತಿನ್ನುವ ಅನ್ನ ಚೆಲ್ಲಿದ ಭೂಪ: ಅದನ್ನೇ ತಿನ್ನಿಸಿ ಬುದ್ಧಿ ಕಲಿಸಿದ ಹೋಟೆಲ್ ಸಿಬ್ಬಂದಿ – Video

0
Spread the love

ಗದಗ: ಗದಗ ನಗರದ ಖಾಸಗಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಕಂಠಪೂರ್ತಿ ಕುಡಿದು ಖಾಸಗಿ ಹೋಟೆಲ್‌ನಲ್ಲಿ ತಿನ್ನುವ ಅನ್ನ ಚೆಲ್ಲಿದ ಭೂಪನಿಗೆ ಹೋಟೆಲ್ ಸಿಬ್ಬಂದಿ ಅನ್ನ ತಿನ್ನಿಸುವ ಮೂಲಕ ಅನ್ನದ ಬೆಲೆ ತಿಳಿಸಿದ ಘಟನೆ ನಡೆದಿದೆ.

Advertisement

ಹೌದು ಖಾಸಗಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಕಂಠಪೂರ್ತಿ ಕುಡಿದು ಅನ್ನ ಸರಿಯಾಗಿಲ್ಲ ಅಂತಾ ರಂಪಾ ಮಾಡಿದ್ದಾನೆ. ಸುಮ್ಮನಿದ್ದ ಸಿಬ್ಬಂದಿ ಬಳಿಕ ಅನ್ನದ ರೇಟು ಯಾಕೆ ಹೆಚ್ಚು ಮಾಡಿದ್ದೀರಿ ಎಂದು ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಈ ವೇಳೆ ಅನ್ನವನ್ನು ನೆಲದ ಮೇಲೆ ಚೆಲ್ಲಾಡಿದ್ದಾನೆ.

ರೈತರು ಕಷ್ಟಪಟ್ಟು ತಿನ್ನಲು ಅನ್ನ ಬೆಳೆಯುತ್ತಾರೆ. ನೀನು ಹಣ, ಕುಡಿದ ಮತ್ತಿನಲ್ಲಿ ಹೀಗೆ ಬಿಸಾಡೋದು ಸರಿಯಲ್ಲ ಎಂದು ಸಿಬ್ಬಂದಿ ಬುದ್ಧಿ ಹೇಳಿದ್ದಾರೆ .ಆದರೆ ಆ ಬಳಿಕವೂ ಅನ್ನ ಚೆಲ್ಲಾಡಿದ್ದಾನೆ. ಬಾಯಿಮಾತಿಗೆ ಕೇಳುವವನಲ್ಲ ಎಂದರಿತ ಸಿಬ್ಬಂದಿ ಗ್ರಾಹಕನಿಗೆ ಚೆಲ್ಲಿದ ಅನ್ನವನ್ನೇ ತಿನ್ನಿಸಿದ್ದಾರೆ. ಅನ್ನದ ಬೆಲೆ ಗೊತ್ತಿಲ್ಲದಿರೋ ಇಂತಹ ಗ್ರಾಹಕನಿಗೆ ಸಿಬ್ಬಂದಿಯೇ ಪಾಠ ಕಲಿಸಿದ್ದಾರೆ. ಸದ್ಯ ಚೆಲ್ಲಾಡಿದ ಅನ್ನವನ್ನೇ ಗ್ರಾಹಕನಿಗೆ ತಿನ್ನಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Spread the love

LEAVE A REPLY

Please enter your comment!
Please enter your name here