ಬೆಂಗಳೂರು: ಜಿಎಸ್‌ಟಿ ದರ ಇಳಿಕೆಯ ಸಂಭ್ರಮದ ನಡುವೆ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಜನರಿಗೆ ಶಾಕ್ ನೀಡಿದೆ. ನಂದಿನಿ ತುಪ್ಪದ ದರ ಪ್ರತಿ ಕೆಜಿಗೆ 90 ರೂ. ಹೆಚ್ಚಳ ಆಗಿದೆ.ಬರೋಬ್ಬರಿ ಒಂದು ಲೀಟರ್ ತುಪ್ಪದ ದರ 90 ರೂ. ಏರಿಕೆಯಾಗಿದೆ. ಇದೀಗ ಒಂದು ಲೀಟರ್ KMF ತುಪ್ಪ 700 ರೂ. ನಿಗದಿ ಮಾಡಲಾಗಿದೆ.
Advertisement
ವಿಶ್ವ ಮಾರುಕಟ್ಟೆಯಲ್ಲಿ ತುಪ್ಪದ ದರ ಏರಿಕೆ ಹಿನ್ನೆಲೆ ಅನಿವಾರ್ಯ ಅಗಿ ತುಪ್ಪದ ದರ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂದಿನಿಂದಲೇ ಕೆಎಂಎಫ್ ತುಪ್ಪದ ದರ ಏರಿಕೆ ಜಾರಿ ಆಗಿದೆ.
ನಂದಿನಿ ತುಪ್ಪದ ಬೆಲೆಗಳು
50 ml ಬಾಟಲಿ — ₹47
100 ml — ₹75
200 ml — ₹155–165
500 ml — ₹350–360
1 ಲೀಟರ್ (1000 ml) — ₹700–720
5 ಲೀಟರ್ — ₹3,525
15 ಲೀಟರ್ (ಬೃಹತ್ ಪ್ಯಾಕ್) — ₹11,475


