ಬಿಗ್ ಬಾಸ್ ಆಟ ಶುರುವಾಗಿ ನಾಲ್ಕು ವಾರಗಳು ಕಳೆದಿವೆ. ನಾಲ್ಕನೇ ವಾರದಲ್ಲಿ ದೊಡ್ಮನೆಯಿಂದ ಒಬ್ಬ ಸ್ಪರ್ಧಿ ಎಲಿಮಿನೇಟ್ ಅಗಲಿದ್ದಾರೆ. ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ಈ ವಾರದ ವೀಕೆಂಡ್ ನಡೆಯಲಿದೆ. ಆದರೆ ಮನೆಯಿಂದ ಆಚೆ ಹೋಗುವುದು ಮಾತ್ರ ಅಧಿಕೃತವಾಗಿದೆ.
ಈ ವಾರದ ವೀಕೆಂಡ್ ಪಂಚಾಯಿತಿಗೆ ಈ ಬಾರಿ ಸುದೀಪ್ ಬಂದಿಲ್ಲ. ಕಳೆದ ಶನಿವಾರ ಸುದೀಪ್ ಅವರ ತಾಯಿ ಸರೋಜಮ್ಮ ನಿಧನರಾದ ಕಾರಣ ಸುದೀಪ್ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ.
ಶನಿವಾರದ ಎಪಿಸೋಡ್ಗೆ ನಿರ್ದೇಶಕ ಯೋಗರಾಜ್ ಭಟ್ ಅವರು ಬಂದಿದ್ದರು. ಕೆಲವರಿಗೆ ರಗಡ್ ಆಗಿಯೇ ಪ್ರಶ್ನೆ ಕೇಳಿದ್ದಾರೆ. ಹಾಗೇ ಸ್ಪರ್ಧಿಗಳಿಗೆ ಸಲಹೆಯನ್ನೂ ನೀಡಿದ್ದಾರೆ. ಇಂದಿನ ಎಪಿಸೋಡ್ಗೆ ಸೃಜನ್ ಬಂದಿದ್ದಾರೆ. ಜತೆಗೆ ಕಾರು ಕೂಡ ಬಂದಿದೆ. ಮನೆಗೆ ಬಂದಿದ್ದ ಖಾಲಿ ಕಾರುಗಳು ಎಲಿಮಿನೇಟ್ ಆದ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿವೆ.
ಮೊದಲಿಗೆ ಬಿಗ್ ಬಾಸ್ ಟಾಸ್ಕ್‌ಗಳನ್ನು ನೀಡಿದ್ದಾರೆ. ಈ ವೇಳೆ ಐಶ್ವರ್ಯಾ ಸೇರಿದಂತೆ ಇನ್ನು ಕೆಲವರು ವಿಕ್ರಂ ಹೆಸರು ಹೇಳಿದ್ದಾರೆ.ಮಾನಸ ಕೂಡ ನಾನು ಏನೋ ಮಾಡೇ ಇಲ್ಲ ಎಂದು ಅನಿಸಲು ಶುರುವಾಗಿದೆ ಎಂದಿದ್ದಾರೆ.
ಇದೀಗ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಮಾನಸ ಮನೆಯಿಂದ ಔಟ್ ಆಗಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಮಾತ್ರವಲ್ಲ ಮಾನಸಾ ಅವರೇ ಮನೆಯಿಂದ ಹೊರ ಹೋಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ನಿನ್ನೆಯ ಸಂಚಿಕೆಯಲ್ಲಿಯೂ ಉಗ್ರಂ ಮಂಜು ಅವರು ಮಾನಸ ಬಗ್ಗೆ ಲಕ್ಷುರಿ ಬಜೆಟ್ ಪಾಯಿಂಟ್ ಹೋದಾಗ ನಾನು ಏನು ಕನ್ವೇ ಮಾಡೋಕೆ ಹೋಗಿದ್ದೆ ಅಂತ ಎಲ್ಲರಿಗೂ ಗೊತ್ತು. ಆದರೆ, ಮಾನಸಾ ಸುಮ್ಮನೆ ರೇಗಾಡಿದರು ಎಂದೂ ಹೇಳಿದ್ದಾರೆ. ಲಕ್ಷುರಿ ಬಜೆಟ್ ವಿಚಾರಕ್ಕೆ ಮಾನಸಾ ಕಿರುಚಾಟ, ಅರುಚಾಟ ಜೋರು ಮಾಡಿದರು.
ಅಷ್ಟು ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಮೋಕ್ಷಿತಾ ಅವರೂ ಹೇಳಿದರು. ಬೇರೆಯವರು ಕಿರುಚಾಡೋದು ನಿಮಗೆ ಎಷ್ಟು ನೋವಾಗುತ್ತೋ, ಹಾಗೇ ನೀವು ಕಿರುಚಾಡೋದು ಬೇರೆಯವರಿಗೂ ಅಷ್ಟೇ ನೋವಾಗುತ್ತೆ ಎಂದು ಮಾನಸ ಕಿರುಚಾಟದ ಬಗ್ಗೆ ಹೇಳಿದರು.
ಎಲ್ಲರೂ ಮಾನಸ ಅವರ ಏರು ಧ್ವನಿ ಬಗ್ಗೆಯೇ ಮಾತನಾಡಿದರು. ಕೊನೆಯಲ್ಲಿ ಯೋಗರಾಜ್ ಭಟ್ ಅವರು ಮಾತಾಡುವ ರೀತಿಯನ್ನ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ತಿದ್ದಿಕೊಳ್ಳೋದಾದರೆ ತಿದ್ದಿಕೊಳ್ಳಿ ಎಂದು ಮಾನಸ ಅವರಿಗೆ ಸಲಹೆ ನೀಡಿದರು.