ಕಳೆದ ಕೆಲ ವರ್ಷಗಳಿಂದ ಅನೇಕ ನಟ, ನಟಿಯರು ಡಿವೋರ್ಸ್ ಪಡೆದುಕೊಂಡಿದ್ದಾರೆ. ಬಣ್ಣದ ಬದುಕಿನಲ್ಲಿ ಡಿವೋರ್ಸ್ ಅನ್ನೋದು ಕಾಮನ್ ಅನ್ನೋ ಹಾಗಾಗಿದೆ,. ಇದೀಗ ಬಿಗ್ ಬಾಸ್ ಸ್ಪರ್ಧಿ, ನಟಿ ಸಂಯಕ್ತಾ ಷಣ್ಮುಗನ್ ಆ ಸಾಲಿಲಗೆ ಸೇರಿಕೊಂಡಿದ್ದಾರೆ.
2007ರಲ್ಲಿ ಮಿಸ್ ಚೆನ್ನೈ ಕಿರೀಟವನ್ನು ಮುಡಿಗೇರಿಸಿಕೊಂಡ ಸಂಯುಕ್ತಾ ಷಣ್ಮುಗನ್ ತುಘ್ಲಕ್ ದರ್ಬಾರ್, ವಾರಿಸು, ಸೇರಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2020ರಲ್ಲಿ ತಮಿಳಿನ ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ಸ್ಫರ್ಧಿಯಾಗಿದ್ದರು. ಇದೀಗ ಸಂಯುಕ್ತಾ ಷಣ್ಮುಗನಾಥನ್ ಈಗ ತಮ್ಮ ಪತಿ ಕಾರ್ತಿಕ್ ಶಂಕರ್ ಅವರಿಂದ ದೂರವಾಗಿದ್ದಾರೆ. ಫೋಟೊಶೂಟ್ ಮೂಲಕ ವಿಚ್ಛೇದನದ ವಿಚಾರವನ್ನು ತಿಳಿಸಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಸಂಯುಕ್ತಾ, ಎಲ್ಲಾ ಪೇಪರ್ ಕೆಲಸಗಳನ್ನು ಮುಗಿಸಿದ್ದೇನೆ, ಹಿಂದೆಂದಿಗಿಂತಲೂ ನಾನು ಬಲಶಾಲಿಯಾಗಿದ್ದೇನೆ ಎಂದು ಹೇಳಿದ್ದಾರೆ. ಡಿವೋರ್ಸ್ ನಂತರ ನನ್ನ ಮುಖದ ಕಳೆ ಎಂದು ತಮ್ಮ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಬ್ಯುಸಿ ಇರುವಾಗಲೇ ಪೋಷಕರ ಒತ್ತಾಸೆಯಂತೆ ಕಾರ್ತಿಕ್ ಶಂಕರ್ ಎಂಬ ಉದ್ಯಮಿಯನ್ನು ಸಂಯುಕ್ತಾ ಮದುವೆಯಾಗಿದ್ದರು. ಇವರಿಗೆ ರಾಯನ್ ಎಂಬ ಮಗ ಕೂಡ ಇದ್ದಾನೆ. ಗಂಡ-ಮನೆ-ಸಂಸಾರ ಎಂದು ಸಂಯುಕ್ತಾ ಖುಷಿಯಾಗಿಯೇ ಇದ್ದರು. ಆದರೆ ಕಾರ್ತಿಕ್ ಶಂಕರ್ ಗೆ ಅನೈತಿಕ ಸಂಬಂಧ ಇದ್ದು ಇದೇ ಕಾರಣಕ್ಕೆ ಸಂಯುಕ್ತಾ ಪತಿಯಿಂದ ದೂರವಾಗಿದ್ದಾರೆ.
ಸಂದರ್ಶನವೊಂದರಲ್ಲಿ ಈ ವಿಚಾರದ ಕುರಿತು ಮಾತನಾಡಿದ್ದ ಸಂಯುಕ್ತಾ ಕೊರೊನಾ ಲಾಕ್ ಡೌನ್ ಸಮಯದಲ್ಲಿ ನನ್ನ ಗಂಡನ ಅಕ್ರಮ ಸಂಬಂಧದ ವಿಚಾರ ನನಗೆ ಗೊತ್ತಾಯ್ತು. ನಾನು ಇಲ್ಲಿ ಲಾಕ್ ಡೌನ್‌ನಲ್ಲಿ ಮನೆಯಲ್ಲಿದ್ದಾಗ ನನ್ನ ಗಂಡ ದುಬೈನಲ್ಲಿ ನಾಲ್ಕು ವರ್ಷಗಳಿಂದ ಬೇರೆ ಒಬ್ಬಳ ಜೊತೆ ಸಂಸಾರ ಮಾಡುತ್ತಿದ್ದಾನೆ ಎನ್ನುವ ಕಹಿ ಸತ್ಯ ತಿಳಿಯಿತು ಎಂದು ಹೇಳಿದ್ದರು. ಆಗ ಲಾಕ್‌ಡೌನ್ ಆಗಿದ್ದರಿಂದ ನಾನು ಎಲ್ಲಿಗೂ ಹೋಗಲು ಸಾಧ್ಯವಾಗಲಿಲ್ಲ, ನನ್ನಿಂದ ಆಗ ಏನೂ ಮಾಡಲು ಆಗಲಿಲ್ಲ ಎಂದು ಕಣ್ಣೀರು ಹಾಕಿದ್ದರು. ಪತಿ ನನಗೆ ಮೋಸ ಮಾಡಿದ್ದರಿಂದ ನನಗೆ ದಿಕ್ಕೇ ತೋಚದಂತಾಗಿತ್ತು ಎಂದು ಕಣ್ಣೀರು ಹಾಕಿದ್ದರು.