ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಸಂಕಷ್ಟದ ನಡುವೆ ಮತ್ತೊಂದು ಕಷ್ಟ ಎದುರಾಗಿದೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಅಶ್ವಿನಿ ಗೌಡ ಅವರ ವಿರುದ್ಧ ದೂರು ದಾಖಲಾಗಿದ್ದು, ಈ ದೂರು ಹೈಕೋರ್ಟ್ ವಕೀಲರಾದ ಪ್ರಶಾಂತ್ ಮೆಹ್ತಾಲ್ ಅವರಿಂದ ನೀಡಲಾಗಿದೆ.
ಅಶ್ವಿನಿ ಗೌಡ, ಸಿನೆಸ್ ಹೆಡ್ ಪ್ರಶಾಂತ್ ನಾಯ್ಕ್, ಸುಷ್ಮಾ, ಪ್ರಕಾಶ್ ಸೇರಿದಂತೆ ನಾಲ್ವರ ವಿರುದ್ಧ ಈ ದೂರು ಸಲ್ಲಿಸಲಾಗಿದೆ. ಪ್ರಕರಣದಲ್ಲಿ ಅಶ್ವಿನಿ ಅವರು ರಕ್ಷಿತಾ ಕುರಿತಾಗಿ ‘ಶಿ ಈಸ್ ಎ ಎಸ್’ (She is a S) ಎಂದು ಹೇಳಿದ್ದನ್ನು ಟೀಕಿಸಲಾಗಿದೆ. ರಕ್ಷಿತಾರ ಉಡುಗೆ ಹಾಗೂ ವರ್ತನೆ ಬಗ್ಗೆ ಅಶ್ವಿನಿ ಅವರು ಈ ಪದ ಬಳಕೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ‘ಎಸ್’ ಎಂಬ ಪದಕ್ಕೆ ವಿವಿಧ ಅರ್ಥಗಳನ್ನು ನೀಡಲಾಗಿದೆ.
ವೀಕೆಂಡ್ ಎಪಿಸೋಡ್‌ನಲ್ಲಿ ಸುದೀಪ್ ಅವರು ಅಶ್ವಿನಿ ಮಾತಿಗೆ ತಕ್ಷಣ ಖಂಡನೆ ವ್ಯಕ್ತಪಡಿಸಿದ್ದರು. ಬಳಿಕ ಅಶ್ವಿನಿ ಅವರು ರಕ್ಷಿತಾ ಬಳಿ ಕ್ಷಮೆಯಾಚಿಸಿದ್ದರು ಮತ್ತು ರಕ್ಷಿತಾ ಸಹ ಅವರಿಗೆ ಕ್ಷಮೆ ನೀಡಿದ್ದರು. ಆದರೂ, ಈ ವಿವಾದದ ಹಿನ್ನೆಲೆಯಲ್ಲಿ ಈಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಮುಂದುವರಿಯುತ್ತಿದೆ.
ಅಂದಹಾಗೆ ಅಶ್ವಿನಿ ಗೌಡ, ನಟಿಯಾಗಿರುವ ಜೊತೆಗೆ ಕರವೇ ಸಂಘಟನೆಯ ಸಕ್ರಿಯ ಸದಸ್ಯೆ ಆಗಿದ್ದು, ಅವರೇ ಹೇಳಿಕೊಂಡಿರುವಂತೆ ಅವರ ಮೇಲೆ ಈಗಾಗಲೇ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಈಗ ಈ ಒಂದು ಹೊಸ ಪ್ರಕರಣವೂ ಅವರ ಮೇಲೆ ಬಂದಿದೆ.