ಬಿಗ್ ಬಾಸ್ ಕನ್ನಡ ಸೀಸನ್ 12ರ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಇದ್ದು, ಮೂವರು ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ.
ಕ್ವಾಟ್ಲೆ ಕಿಚನ್’ ಫಿನಾಲೆಯಲ್ಲಿ ಇವರ ಹೆಸರನ್ನು ರಿವೀಲ್ ಮಾಡಲಾಗಿದೆ. ಮೊದಲ ಸ್ಪರ್ಧಿಯಾಗಿ ಕಾಕ್ರೋಚ್ ಸುಧಿ ಹೆಸರನ್ನು ತೋರಿಸಿದರು. ಕಾಕ್ರೋಚ್ ಸುಧಿ ಅವರು ಸಿನಿಮಾಗಳಲ್ಲಿ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು. ಅವರು ‘ಟಗರು’ ಸಿನಿಮಾದಲ್ಲಿ ಕಾಕ್ರೋಚ್ ಪಾತ್ರ ಮಾಡಿದ್ದರು. ಅಂದಿನಿಂದ ಅವರು ಕಾಕ್ರೋಚ್ ಸುಧಿ ಎಂದೇ ಫೇಮಸ್ ಆದರು. ಅವರು ಬಿಗ್ ಬಾಸ್ಗೆ ಬರೋದಿಲ್ಲ ಎನ್ನುತ್ತಲೇ ದೊಡ್ಮನೆಗೆ ಬಂದಿದ್ದಾರೆ.
ಮಂಜು ಭಾಷಿಣಿ ಅವರು ಕೂಡ ಬಿಗ್ ಬಾಸ್ಗೆ ಬರುತ್ತಿದ್ದಾರೆ. ಅವರು ‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ಲಲಿತಾಂಬ ಹೆಸರಿನ ಪಾತ್ರ ಮಾಡಿದ್ದರು. ಅವರು ಸಿನಿಮಾಗಳಲ್ಲೂ ಮಾಡಿದ್ದಾರೆ. ಜೀ ಕನ್ನಡದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಅವರು ಬಂಗಾರಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಬಿಗ್ ಬಾಸ್ಗೆ ಬರುತ್ತಿರುವುದು ರಿವೀಲ್ ಆಗಿದೆ.
ಮೂರನೇ ಸ್ಪರ್ಧಿಯಾಗಿ ಮಲ್ಲಮ್ಮ ಅವರು ಬರುತ್ತಿದ್ದಾರೆ. ಅವರು ಉತ್ತರ ಕರ್ನಾಟಕದವರು. ಮಾತಿನ ಮಲ್ಲಿ ಮಲ್ಲಮ್ಮ ಎಂದೇ ಫೇಮಸ್. ರೀಲ್ಸ್ ಮಾಡಿಯೂ ಫೇಮಸ್ ಆಗಿದ್ದಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಸೆಪ್ಟೆಂಬರ್ 28ರಂದು ರಿವೀಲ್ ಆಗಲಿದೆ. ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಫ್ಯಾನ್ಸ್ ಕೂಡ ಕಾದಿದ್ದಾರೆ.



