ಬಿಗ್‌ ಬಾಸ್‌ ರಂಜಿತ್‌ ಹೆಂಡತಿಗೆ 13 ವರ್ಷದ ಮಗಳಿದ್ದಾಳೆ: ಸಹೋದರಿಯ ಶಾಕಿಂಗ್‌ ಸ್ಟೇಟ್‌ ಮೆಂಟ್

0
Spread the love

ಬಿಗ್‌ ಬಾಸ್ ಮಾಜಿ ಸ್ಪರ್ಧಿ ರಂಜಿತ್ ಮನೆ ಜಗಳ ಇದೀಗ ಬೀದಿಗೆ ಬಂದಿದೆ. ರಂಜಿತ್‌ ಪತ್ನಿ ಹಾಗೂ ಅಕ್ಕ ಹೊಡೆದಾಡಿಕೊಂಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಫ್ಲಾಟ್‌ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದ್ದು ಇದೀಗ ರಂಜಿತ್‌ ಸಹೋದರಿ ರಶ್ಮಿ ಅವರು ರಂಜಿತ್‌ ಪತ್ನಿಗೆ 13 ವರ್ಷದ ಮಗಳಿದ್ದಾಳೆ ಎಂದು ಶಾಕಿಂಗ್‌ ಹೇಳಿಕೆ ನೀಡಿದ್ದಾರೆ.

Advertisement

ರಂಜಿತ್‌ ಅವರು ನಾನು ದುಟ್ಟುಕೊಟ್ಟ ಫ್ಲಾಟ್‌ ಖರೀದಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ರಂಜಿತ್‌ ಸಹೋದರಿ ರಶ್ಮಿ ಇದು ನನ್ನ ಸ್ವಯಾರ್ಜಿತ್‌ ಪ್ರಾಪರ್ಟಿ. ಅದನ್ನು ಆತನಿಗೆ ಯಾಕೆ ಬಿಟ್ಟುಕೊಡಲಿ ಅಂತಿದ್ದಾರೆ.

ರಂಜಿತ್‌ ಮದುವೆಯಾದ ಮೇಲೆ ನನ್ನ ಫ್ಲಾಟ್‌ ಅನ್ನು ಬಾಡಿಗೆಗೆ ಕೇಳಿದ್ದ. ಹಾಗಾಗಿ ಬಿಟ್ಟುಕೊಟ್ಟಿದೆ. ಮದುವೆಯಾಗಿ ಇಲ್ಲಿಯ ತನಕ ಒಂದು ತಿಂಗಳು ಬಾಡಿಗೆ ಕಟ್ಟಿದ್ದಾನೆ. 2ನೇ ತಿಂಗಳು ದುಡ್ಡು ಕೊಡು ಅಂದರೆ, ʻನನ್ನ ಹೆಸರಿಗೆ, ನನ್ನ ಹೆಂಡತಿ ಹೆಸರಿಗೆ ಬರೆದುಕೊಡುʼ ಅಂತಿದ್ದಾನೆ. ಕಷ್ಟ ಪಟ್ಟಿದ್ದು ನಾನು ಆತನ ಹೆಂಡತಿ ಹೆಸರಿಗೆ ಯಾಕೆ ಕೊಡಲಿ ಎಂದು ರಶ್ಮಿ ಪ್ರಶ್ನೆ ಮಾಡಿದ್ದಾರೆ.

ಬಾಡಿಗೆ ಕೇಳಿದರೆ ನನ್ನ ಹತ್ತಿರ ಕ್ಯಾಶ್‌ ಇಲ್ಲ. ಕೊಡಲ್ಲ ಅಂತಾನೆ. ಏನು ಮಾಡಲಿ ಅಂತ ಕೇಳಿದ್ರೆ, ಫ್ಲಾಟ್‌ ನನ್ನ ಹೆಂಡತಿ ಹೆಸರಿಗೆ ಬರೆದುಕೊಡು ನಾನು ಬಾಡಿಗೆ ಕೊಡ್ತೀನಿʼ ಎಂದ. ಕಷ್ಟ ಪಟ್ಟಿದ್ದು ನಾನು, ಇಎಮ್‌ಐ ಕಟ್ಟಿರುವವಳು ನಾನು ಅಂದಮೇಲೆ ಫ್ಲಾಟ್‌ ಯಾಕೆ ಅವನಿಗೆ ಕೊಡಲಿ?” ಎಂದು ರಶ್ಮಿ ಕೇಳಿದ್ದಾರೆ.

ನನ್ನ ಹೆಂಡತಿ ಥಿಂಗ್ಸ್‌ ಜಾಸ್ತಿ ಇದೆ. ಅವಳಿಗೊಂದು ಮಗಳಿದ್ದಾಳೆ, ಮಗಳಿಗೊಂದು ರೂಮ್‌ ಬೇಕು. ನಮಗೊಂದು ರೂಮ್‌ ಬೇಕು, ಅಪ್ಪ ಒಂದು ರೂಮ್‌ನಲ್ಲಿರುತ್ತಾರೆ” ಎಂದು ಹೇಳಿ 3 ಬಿಎಚ್‌ಕೆ ಬಿಟ್ಟುಕೊಡೋಕೆ ಹೇಳಿದ. “ಅವನ ಹೆಂಡತಿಗೆ 13 ವರ್ಷದ ಮಗಳಿದ್ದಾಳೆ. ಹಾಗಾಗಿ ಮಾನವೀಯತೆ ದೃಷ್ಟಿಯಿಂದ ನಾನು ಬಿಟ್ಟುಕೊಟ್ಟಿದೆ.

ರಂಜಿತ್‌ ಪತ್ನಿ ಮಾನಸಾಗೆ ಹದಿಮೂರು ವರ್ಷದ ಮಗಳಿದ್ದಾಳೆ. ಆದರೆ ಅದು ಅವನ ಪರ್ಸನಲ್, ಅದು ನನಗೆ ಬೇಕಿಲ್ಲ. ಒಂದು ರೂಮ್‌ನಲ್ಲಿ ಅಪ್ಪ, ಇನ್ನೊಂದು ರೂಮ್‌ನಲ್ಲಿ ಅವರ ಮಗಳು, ಮತ್ತೊಂದು ರೂಮ್‌ನಲ್ಲಿ ಅವನು, 3 ಬಿಎಚ್‌ಕೆ ಬೇಕಾಗುತ್ತದೆ ನನಗೆ ಬಿಟ್ಟುಕೊಡು ಬಾಡಿಗೆ ಏನಿದೆ ನಾನು ಕಟ್ಟುತ್ತೇನೆ ಅಂದಿದ್ದ. ಈ ಕಾರಣಕ್ಕೆ ಮನೆ ಬಿಟ್ಟುಕೊಟ್ಟಿದ್ದೆ” ಎಂದು ರಂಜಿತ್‌ ಅಕ್ಕ ರಶ್ಮಿ ಹೇಳಿಕೊಂಡಿದ್ದಾರೆ.

ಆ ಫ್ಲಾಟ್‌ ನಮ್ಮ ಅಮ್ಮ ತೀರಿಕೊಂಡ ಜಾಗ. ಹಾಗಾಗಿ ಆ ಜಾಗ ಬಿಟ್ಟು ಬರಲ್ಲ ಅಂತ ಅಪ್ಪ ಹಠ ಹಿಡಿದರು. ನಮ್ಮ ತಂದೆಯೂ ಅಲ್ಲೇ ಹೇಗೋ ಸುಧಾರಿಸಿಕೊಂಡು ಇರುತ್ತೇನೆ ಅಂತ ಹೇಳಿದ್ದರು. ಒಂದೂವರೆ ತಿಂಗಳಾಯ್ತು ಅಪ್ಪನಿಗೆ ಊಟ ತಿಂಡಿ ಏನೂ ಇಲ್ಲ. ನಮ್ಮ ಮನೆಯಲ್ಲಿ ಊಟ ಮಾಡುತ್ತಾರೆ, ಕೆಳಗೆ ಫ್ಲಾಟ್‌ಗೆ ಹೋಗುತ್ತಾರೆ. ಆದರೆ ಮೊನ್ನೆ ತಂದೆಯನ್ನೂ ಹೊರಗೆ ಹಾಕಿದ್ದಾನೆ. ಅಪ್ಪ ಅವನ ಮನೆಗೆ ಹೋದಾಗ, ಬಾಗಿಲು ತೆಗೆಯದೇ ಅಪ್ಪ ಬೇಸ್‌ಮೆಂಟ್‌ನಲ್ಲಿ ಮಲಗಿದ್ದರು. 75 ವರ್ಷದ ಅಪ್ಪನಿಗೆ ಬಾಗಿಲು ತೆಗೆಯದೇ ಹೊರಗೆ ಹಾಕಿದಾಗ, ಮಗಳಾದವಳಿಗೆ ಹೊಟ್ಟೆ ಉರಿಯಲ್ವಾ?” ಎಂದು ರಶ್ಮಿ ಬೇಸರ ಹೊರ ಹಾಕಿದ್ದಾರೆ.

 


Spread the love

LEAVE A REPLY

Please enter your comment!
Please enter your name here