ದಾವಣಗೆರೆ: ಬಿಹಾರ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಪಾಠ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಹಾರ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಪಾಠ.
ಸೋಲಿಗೆ ಎಲ್ಲೆಲ್ಲಿ ಲೋಪದೋಷ ಆಗಿದೆ ಎನ್ನುವುದರ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಬಿಹಾರ ರಾಜ್ಯದಲ್ಲಿ ನಡೆದಿದೆ ಎನ್ನಲಾದ ವೋಟ್ ಚೋರಿ ಬಗ್ಗೆ ಮೊದಲಿಂದಲೂ ಆರೋಪ ಕೇಳಿ ಬರುತ್ತಿದೆ. ಅದಕ್ಕೆ ಚುನಾವಣಾ ಆಯೋಗ ಉತ್ತರ ಕೊಡಬೇಕಿದೆ ಎಂದರು.
ಕಾಂಗ್ರೆಸ್ನವರು ಏನು ಆರೋಪ ಮಾಡಿದ್ದಾರೋ ಅದಕ್ಕೆ ಅವರು ಉತ್ತರ ಕೊಡಬೇಕಿದೆ. ಬಿಹಾರದ ಜನತೆಯ ಮನಸ್ಥಿತಿ ಇಲ್ಲಿಯ ಜನರ ಮನಸ್ಥಿತಿ ಬೇರೆ ಬೇರೆ. ಕರ್ನಾಟಕದಲ್ಲಿ ಅಹಿಂದಕ್ಕೆ ಹೆಚ್ಚು ಮಹತ್ವ ಇದೆ.
ಬಿಹಾರದಲ್ಲಿ ಎಲ್ಲರನ್ನೂ ಒಗ್ಗೂಡಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಎಲ್ಲಾ ಅಹಿಂದ ವರ್ಗವನ್ನು ಒಗ್ಗೂಡಿಸಲು ಸಾಧ್ಯವಿದೆ. ಬಿಹಾರ ಚುನಾವಣೆ ಫಲಿತಾಂಶ ಗೆದ್ದರೂ ಚರ್ಚೆಯಾಗಬೇಕು, ಸೋತರೂ ಚರ್ಚೆಯಾಗಬೇಕು ಎಂದು ಸಚಿವ ಜಾರಕಿಹೊಳಿ ಹೇಳಿದ್ದಾರೆ.



