ನವದೆಹಲಿ: ಬಿಹಾರಕ್ಕೆ ಇಂದು ನಿರ್ಣಾಯಕ ದಿನ, ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ಕಾದು ನೋಡಬೇಕಿದೆ. 243 ಸ್ಥಾನಗಳ ಎರಡು ಹಂತಗಳ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ 46 ಮತಗಟ್ಟೆಗಳಲ್ಲಿ ಪ್ರಾರಂಭವಾಗಿದ್ದು,
ಬೆಳಗ್ಗೆ 11:15ರ ಟ್ರೆಂಡ್ ಪ್ರಕಾರ ಒಟ್ಟು 243 ಕ್ಷೇತ್ರಗಳಲ್ಲಿ ಎನ್‌ಡಿಎ (NDA) 192, ಮಹಾಘಟಬಂಧನ್ 46, ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಪಕ್ಷವಾರು ಲೆಕ್ಕ ತೆಗೆದುಕೊಂಡರೆ ಬಿಜೆಪಿ (BJP) 83, ಜೆಡಿಯು 80, ಆರ್‌ಜೆಡಿ 34, ಕಾಂಗ್ರೆಸ್ 5, ಇತರ ಪಕ್ಷಗಳು 41 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಹಾರ ಚುನಾವಣೆಯ ಮತ ಎಣಿಕೆಯ ಎನ್‌ಡಿಎ ಮೈತ್ರಿಕೂಟ 190ಕ್ಕೂ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಕಾಂಗ್ರೆಸ್ ಡಬಲ್ ಡಿಜಿಟ್ ದಾಟಲು ಒದ್ದಾಡುತ್ತಿದೆ.
ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಯ ಮುಂಚಿನ ದಿನದವರೆಗೂ ಮಹಾಘಟಬಂಧನ್‌ನಲ್ಲಿ ಸೀಟು ಹಂಚಿಕೆ ಸರಿಯಾಗಿರಲಿಲ್ಲ. ಅದರಲ್ಲೂ ಕಾಂಗ್ರೆಸ್ ಪಕ್ಷದ ಅಸಮಾಧಾನ ಬಹಿರಂಗವಾಗಿತ್ತು. ಅಭ್ಯರ್ಥಿಗಿಂತಲೂ ಪಕ್ಷದ ರಾಜ್ಯಾಧ್ಯಕ್ಷರು ದುಡ್ಡು ಕೊಟ್ಟವರಿಗೆ ಟಿಕೆಟ್ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.


