ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ನಾರಿ ಶಕ್ತಿ ವಂದನಾ ಯಾತ್ರಾ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಮಹಿಳೆಯರ ಆರ್ಥಿಕತೆಯನ್ನು ಬಲಪಡಿಸಲು ಹಮ್ಮಿಕೊಂಡಿರುವ ನಾರಿ ಶಕ್ತಿ ಯೋಜನೆಯ ಅರಿವು ಮೂಡಿಸುವ ಉದ್ದೇಶದಿಂದ ಬಿಜೆಪಿ ಮಹಿಳಾ ಮೋರ್ಚಾ ಹಮ್ಮಿಕೊಂಡಿದ್ದ ಈ ರ‍್ಯಾಲಿಗೆ ಪೂಜ್ಯ ಕಲ್ಲಯ್ಯಜ್ಜನವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಶಕ್ತಿವಂದನಾ ಕಾರ್ಯಕ್ರಮದ ಗದಗ ಜಿಲ್ಲಾ ಪ್ರಭಾರಿ ಭಾರತಿ ಅಳವಂಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ನಿರ್ಮಲಾ ಕೊಳ್ಳಿ, ಪಕ್ಷದ ಹಿರಿಯರಾದ ಕಾಂತೀಲಾಲ ಬನ್ಸಾಲಿ, ಅನಿಲ ಅಬ್ಬಿಗೇರಿ, ಸಿದ್ದು ಪಲ್ಲೇದ, ನಗರಸಭಾ ಅಧ್ಯಕ್ಷೆ ಉಷಾ ದಾಸರ, ಪ್ರಮುಖರಾದ ವಿಜಯಲಕ್ಷ್ಮಿ ಮಾನ್ವಿ, ಸ್ವಾತಿ ಅಕ್ಕಿ, ಕವಿತಾ ಬಂಗಾರಿ, ಸಾವಿತ್ರಿ ಪಾಟೀಲ, ಶಿವಲಿಲಾ ಉಮಚಗಿ, ಸುಮಂಗಲಾ ಕೊನೆವಾಲ, ಕಮಲಾಕ್ಷಿ ತಕ್ಕಲಕೋಟಿ, ಶೇಖವ್ವ ಮಾಸರೆಡ್ಡಿ, ಯೋಗೇಶ್ವರ ಭಾವಿಕಟ್ಟಿ, ಮೇಘನಾ ಕೊಟ್ಟುರ, ರೇಖಾ ಬಂಗಾರಶೆಟ್ಟರ, ವಿಜಯಲಕ್ಷ್ಮಿ ದಿಂಡೂರ, ಚನ್ನಮ್ಮ ಹುಳಕಣ್ಣವರ, ವಿದ್ಯಾವತಿ ಗಡಗಿ, ಅಶೋಕ ಸಂಕಣ್ಣವರ, ಸಂತೋಷ ಅಕ್ಕಿ, ರಮೇಶ ಸಜ್ಜಗಾರ, ಅಮರನಾಥ ಬೆಟಗೇರಿ, ಸುರೇಶ ಚಿತ್ತರಗಿ, ಮುತ್ತು ಮುಶಿಗೇರಿ, ಅಮರನಾಥ ಗಡಗಿ ಮುಂತಾದವರಿದ್ದರು.