ಡಾ. ಕಿಂಇಣ್ಣ ರೈ ನಾಡಿನ ಆಸ್ತಿ : ಬಸವರಾಜ ಹೊರಟ್ಟಿ

0
Birth anniversary of Nadoja Dr. Kaiyyar Kiminna Rai
Spread the love

ವಿಜಯಸಾಕ್ಷಿ ಸುದ್ದಿ, ಕಾಸರಗೋಡು : ಕಾಸರಗೋಡು ಜಿಲ್ಲೆಯನ್ನು ಕರ್ನಾಟಕಕ್ಕೆ ವಿಲೀನಗೊಳಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಹುಮುಖ ಪ್ರತಿಭೆ ನಾಡೋಜ ಡಾ.ಕೈಯ್ಯಾರ್ ಕಿಂಇಣ್ಣ ರೈ ಸೇವೆಯನ್ನು ಈ ನಾಡಿನ ಜನ ಎಂದೂ ಮರೆಯಲಾರರು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ಅವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕೈಯ್ಯಾರಿನ ಶ್ರೀ ರಾಮಕೃಷ್ಣ ಇ.ಎಲ್.ಪಿ. ಶಾಲೆಯಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡ, ಕಲ್ಲೂರು ಪ್ರತಿಷ್ಠಾನ ಮಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ (ಜೋಡುಕಲ್ಲು) ನಾಡೋಜ ಡಾ.ಕೈಯ್ಯಾರ್ ಕಿಂಇಣ್ಣ ರೈ ಅವರ ಜನ್ಮ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಭಾನ್ವಿತರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ನಾಡೋಜ ಡಾ.ಕೈಯ್ಯಾರ್ ಕಿಂಇಣ್ಣ ರೈ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತರಾಗಿ, ಲೇಖಕರಾಗಿ, ಕವಿಯಾಗಿ, ಒಬ್ಬ ಆದರ್ಶ ಶಿಕ್ಷಕರಾಗಿ ಸಲ್ಲಿಸಿದ ಸೇವೆ ಅಪಾರ. ಇವರು ಕಾಸರಗೋಡು ಜಿಲ್ಲೆಯನ್ನು ಕರ್ನಾಟಕಕ್ಕೆ ವಿಲೀನಗೊಳಿಸಲು ಸಾಕಷ್ಟು ಹೋರಾಟ ಮಾಡುವ ಮೂಲಕ ಆ ಭಾಗದಲ್ಲಿ ಜನ ಜಾಗೃತಿಗೊಳಿಸುವಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ. ಆ ಭಾಗದಲ್ಲಿ ಕರ್ನಾಟಕ ಸಂಸ್ಕೃತಿಯನ್ನು ಬಿತ್ತುವ ಮೂಲಕ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಇಂತಹವರ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನನ್ನ ಸೌಭಾಗ್ಯ ಎಂದರು.
ಈ ಸಂದರ್ಭದಲ್ಲಿ ಕಲ್ಲೂರು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಲೂರ, ಕನ್ನಡ ಏಕೀಕರಣ ಹೋರಾಟಗಾರರು, ಸಾಹಿತಿಗಳಾದ ಆಯಿಷಾ ಎ.ಎ. ಪೆರ್ಲ, ಪೈವೊಳಕೆ ಗ್ರಾ.ಪಂ ಅದ್ಯಕ್ಷರಾದ ಜಯಂತಿ, ಮಂಜೇಶ್ವರ ಬ್ಲಾಕ್ ಪಂಚಾಯತ ಸದಸ್ಯರಾದ ಪಾತಿಮತ್ ಝೌರ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಪೈವೊಳಿಕೆ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶ್ರೀಧರ ಹೊಳ್ಳಾ, ಕಾಸರಗೋಡ ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರವಿ ನಾಯ್ಕೂಪು, ಕೇರಳ ಗಡಿನಾಡು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜಯಪ್ರಕಾಶ ತೊಟ್ಟೆತ್ತೋಡಿ, ಮಂಜೇಶ್ವರದ ಪ್ರಭಾರಿ ಉಪ ಜಿಲ್ಲಾ ವಿದ್ಯಾಧಿಕಾರಿ ಜೀತೇಂದ್ರ ಎಸ್.ಎಚ್, ಸಾಹಿತ್ಯ ಸಂಘಟಕರಾದ ಎ.ಶ್ರೀನಾಥ. ಸಮಾಜ ಸೇವಕರಾದ ಪ್ರಸಾದ ರೈ ಕೈಯ್ಯಾರು, ಮೋಹನ್ ರೈ ಕೈಯ್ಯಾರು, ಮುಖ್ಯೋಪಾಧ್ಯಾಯರಾದ ಹೇಮಲತಾ, ರಕ್ಷಕ ಶಿಕ್ಷಕ ಸಂಘ ಶ್ರೀ ರಾಮಕೃಷ್ಣ ಎ.ಎಲ್.ಪಿ ಶಾಲೆ ಅಧ್ಯಕ್ಷ ದೀಪಕ ಶರ್ಮಾ, ಕಾರ್ಯದರ್ಶಿಗಳಾದ ಅಖಿಲೇಶ ನಗುಮೊಗಂ ಮುಂತಾದವರು ಉಪಸ್ಥಿತರಿದ್ದರು.
ಗಡಿನಾಡು ಕಾಸರಗೋಡಿನ ಕನ್ನಡಿಗರ ಧ್ವನಿಯಾಗಿ ದುಬೈ, ಮುಂಬೈ, ಬೆಂಗಳೂರು, ಹೈದರಾಬಾದ್, ದಕ್ಷಿಣಕನ್ನಡ ಹಾಗೂ ಇನ್ನಿತರ ಕಡೆ ತಮ್ಮ ಕನ್ನಡದ ಪ್ರೇಮವನ್ನು ಬಿತ್ತಿದ ಸಮಾಜ ಸೇವಕರು, ರಾಜಕೀಯ ಮುಖಂಡರು ಹಾಗೂ ಹಲವಾರು ಪ್ರಶಸ್ತಿಗೆ ಭಾಜನರಾದ ಆಯಿಷಾ ಎ.ಎ. ಪೆರ್ಲ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Spread the love
Advertisement

LEAVE A REPLY

Please enter your comment!
Please enter your name here