HomeGadag Newsಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಿ : ಮುದುವ್ವನವರ ಶಂಕರ್

ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಿ : ಮುದುವ್ವನವರ ಶಂಕರ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಬಿಜೆಪಿ ಬಲವರ್ಧನೆಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅಭಿಯಾನದ ಮಂಡಲ ಸಂಚಾಲಕ ಮುದುವ್ವನವರ ಶಂಕರ್ ತಿಳಿಸಿದರು.

ಪಟ್ಟಣದ ಐಬಿ ವೃತ್ತದಲ್ಲಿ ಬುಧವಾರ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಕ್ಷ ಶಕ್ತಿಯುತವಾಗಲು ಪ್ರತಿಯೊಬ್ಬ ಕಾರ್ಯಕರ್ತನ ಶ್ರಮವೇ ಕಾರಣ. ಕಾರ್ಯಕರ್ತರಿಂದಲೇ ಇಂದು ಬಿಜೆಪಿ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ. ತಳಮಟ್ಟದಲ್ಲಿ ಶ್ರಮಿಸಿದ ಅನೇಕರು ಇಂದು ರಾಷ್ಟç ಮಟ್ಟದ ನಾಯಕರಾಗಿದ್ದಾರೆ ಎಂದರು.

ತಾಲೂಕು ಮಂಡಲ ಅಧ್ಯಕ್ಷ ಕೆ. ಲಕ್ಷ್ಮಣ ಮಾತಮಾಡಿ, ಬಿಜೆಪಿ ಪಕ್ಷವು ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸದಸ್ಯರನ್ನು ನೊಂದಾವಣೆ ಮಾಡಿಸಿ ಪಕ್ಷ ಬಹುಮತದಿಂದ ಆಡಳಿತಕ್ಕೆ ಬರಲು ಸಹಕರಿಸೋಣ ಎಂದರು.

ಕಡ್ಲಿ ರಾಘವೇಂದ್ರ ಶೆಟ್ಟಿ, ಎ. ಉದಯ್ ಕುಮಾರ್, ಬಾಗಳಿ ಕೊಟ್ರೇಶ್, ಹಾರಳು ಅಶೋಕ, ಲಿಂಬ್ಯಾನಾಯ್ಕ, ಓಂಕಾರಗೌಡ, ಕುಸುಮಾ ಜಗದೀಶ್, ತೆಲಿಗಿ ಗಂಗಾಧರ, ಬಾಗಳಿ ಜಗದೀಶ್, ಬಂಡ್ರಿ ರಾಜು, ಸ್ವಪ್ನ ಮಲ್ಲಿಕಾರ್ಜುನ, ರೇಖಮ್ಮ, ಬೂದಿ ನವೀನ ಹಾಗೂ ಇತರರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!