HomeGadag Newsಎಲ್‌ಐಸಿ ಕಚೇರಿಯಲ್ಲಿ 68ನೇ ವರ್ಷದ ವಿಮಾ ಸಪ್ತಾಹ

ಎಲ್‌ಐಸಿ ಕಚೇರಿಯಲ್ಲಿ 68ನೇ ವರ್ಷದ ವಿಮಾ ಸಪ್ತಾಹ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಸಿ.ಡಿ. ದೇಶ್‌ಮುಖ್‌ರವರ ದೂರದೃಷ್ಟಿಯಿಂದ ರಾಷ್ಟ್ರೀಕೃತಗೊಂಡ ಎಲ್‌ಐಸಿಯು ಅನೇಕ ವಿಮಾ ಕಂಪನಿಗಳನ್ನು ಬದಿಗೊತ್ತಿ ಅಗ್ರ ಸ್ಥಾನವನ್ನು ಪಡೆದಿದೆ ಎಂದು ಹರಪನಹಳ್ಳಿ ಶಾಖಾಧಿಕಾರಿ ಹೆಚ್.ಜಿ. ರಾಜೇಶ್ ತಿಳಿಸಿದರು.

ಪಟ್ಟಣದ ಎಲ್‌ಐಸಿ ಕಚೇರಿಯಲ್ಲಿ ನಡೆದ 68ನೇ ವರ್ಷದ ವಿಮಾ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸದಿಂದ ಹಾಗೂ ಸಿಬ್ಬಂದಿಗಳ ನಿರಂತರ ಪರಿಶ್ರಮದಿಂದ
ಇಂದು ನಾವು ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ವಿಮಾ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ. ಹನುಮಂತ ಮಾತನಾಡಿ, ಸಂಸ್ಥೆಯು ಕೇಂದ್ರ ಸರ್ಕಾರಕ್ಕೆ ಪಂಚವಾರ್ಷಿಕ ಯೋಜನೆಗಳ ಮೂಲಕ ಹಣ ಒದಗಿಸುತ್ತದೆ ಎಂದರು.

ಆಡಳಿತಾಧಿಕಾರಿ ಕೆ. ಬಸವರಾಜ್, ಉಪ ಶಾಖಾಧಿಕಾರಿ ಅಜಿತ್ ರಾಯರೆಡ್ಡಿ, ಸಿದ್ದರಾಮೇಶ್ವರ, ವೆಂಕಪ್ಪ ಗೊಲ್ಲರ, ನಾಗನಗೌಡ, ಎಂ. ಅಂಬಣ್ಣ, ರಾಯಚೂರು ಮುಖ್ಯ ವಿಭಾಗೀಯ ವಿಮಾ ಸಲಹೆಗಾರ ಹೇಮಣ್ಣ ಮೋರಿಗೆರೆ ಮಾತನಾಡಿದರು.

ಹಿಮಾಂಶು, ಶಿವಕುಮಾರ್, ವೆಂಕಟೇಶ, ಸಿಬ್ಬಂದಿಗಳು, ಅಭಿವೃದ್ಧಿ ಅಧಿಕಾರಿಗಳು, ಪ್ರತಿನಿಧಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img