ಬೆಂಗಳೂರಿಗೆ ಬಿಜೆಪಿ ಸಂಸದೆ ಕಂಗನಾ ರಣಾವತ್ ಭೇಟಿ: ಶಿವೋಹಂ ಶಿವ ದೇವಸ್ಥಾನದಲ್ಲಿ ಪೂಜೆ!

0
Spread the love

ಬೆಂಗಳೂರು:- ಬೆಂಗಳೂರಿನ ಶಿವೋಹಂ ಶಿವ ಮತ್ತು ವೈಷ್ಣೋದೇವಿ ದೇವಸ್ಥಾನಕ್ಕೆ ಇಂದು ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಭೇಟಿ ನೀಡಿದರು. 65 ಅಡಿ ಎತ್ತರದ ಭವ್ಯವಾದ ಶಿವನ ಪ್ರತಿಮೆ ಹಾಗೂ ಧ್ಯಾನ ಮಂದಿರವನ್ನು ಹೊಂದಿರುವ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥಿಸಿದರು.

Advertisement

ಆಧ್ಯಾತ್ಮಿಕತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ನಟಿ ಅದೇ ಆವರಣದಲ್ಲಿರುವ ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೂ ಹೋಗಿ ಸ್ವಲ್ಪ ಕಾಲಕಳೆದರು. ಇದೇ ವೇಳೆ ದೇವಸ್ಥಾನದ ಸಂಸ್ಥಾಪಕ, ಆಧ್ಯಾತ್ಮಿಕ ನಾಯಕ ಏರ್-ಆತ್ಮನ್ ಇನ್ ರವಿ ಅವರ ಜೊತೆ ಮಾತುಕತೆ ನಡೆಸಿದರು.

ಭೇಟಿ ಕುರಿತು ಮಾತನಾಡಿದ ಕಂಗನಾ, ಏರ್ ಆತ್ಮನ್ ಜೊತೆಗಿನ ಸಂಭಾಷಣೆ ಬಹಳ ಅರ್ಥಪೂರ್ಣವಾಗಿತ್ತು. ಅವರ ಆಂತರಿಕ ಆಧ್ಯಾತ್ಮಿಕ ದೃಷ್ಟಿಕೋನ ನನ್ನಲ್ಲಿ ಪ್ರತಿಧ್ವನಿಸುತ್ತದೆ. ನಾನು ಬೆಂಗಳೂರಿನಲ್ಲಿರುವಾಗಲೆಲ್ಲಾ, ಧ್ಯಾನ ಮಾಡಲು ಇಲ್ಲಿಗೆ ಬರಲು ಇಷ್ಟಪಡುತ್ತೇನೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here