ಬೆಂಗಳೂರು:- ಬಿಜೆಪಿ ಸಂಸದರು, ಶಾಸಕರ ಸುಳ್ಳಿನ ಫ್ಯಾಕ್ಟರಿಯಲ್ಲಿ ಇದ್ದಾರೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿಯಾದಾಗಿನಿಂದ ಸುಳ್ಳಿನ ಫ್ಯಾಕ್ಟರಿ ಓಪನ್ ಮಾಡಿದ್ದಾರೆ. ಸುಳ್ಳಿನ ಫ್ಯಾಕ್ಟರಿ ಮೋದಿ ಮತ್ತು ಅಮಿತ್ ಶಾ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಈ ಕಾರ್ಖಾನೆಯನ್ನು ನಡೆಸಲು ಹಲವು ಜೀತದಾಳುಗಳನ್ನು ಇಟ್ಟುಕೊಂಡಿದ್ದಾರೆ, ಬಾಡಿಗೆ ಭಾಷಣಕಾರರನ್ನೂ ಇಟ್ಟುಕೊಂಡಿದ್ದಾರೆ. ಬಿಜೆಪಿ ಸಂಸದರು, ಶಾಸಕರು ಕೂಡ ಈ ಸುಳ್ಳಿನ ಫ್ಯಾಕ್ಟರಿಯಲ್ಲಿ ಇದ್ದಾರೆ. ಸುಳ್ಳು ಸುದ್ದಿ, ವದಂತಿ ಹಬ್ಬಿಸಲು ಇವರನ್ನೆಲ್ಲಾ ಇಟ್ಟುಕೊಂಡಿದ್ದಾರೆ ಎಂದರು.
ಸುಳ್ಳು ಸುದ್ದಿ ಹಬ್ಬಿಸುವುದು ಸಮಾಜಕ್ಕೆ ಧಕ್ಕೆ ತಂದಂತೆ, ಸುಳ್ಳು ಸುದ್ದಿ ಹಬ್ಬಿಸುವುದು ಅಪರಾಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಬಾಡಿಗೆ ಭಾಷಣಕಾರರಾಗಿದ್ದಾರೆ. ನಿನ್ನೆ ವಕ್ಫ್ ನೋಟಿಸ್ನಿಂದ ರೈತರು ಆತ್ಮಹತ್ಯೆ ಅಂತ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು. ಬಳಿಕ ಅದು ಸುಳ್ಳು ಸುದ್ದಿ ಅಂತ ಗೊತ್ತಾಗಿ ಟ್ವೀಟ್ ಡಿಲೀಟ್ ಮಾಡಿದ್ದಾರೆ.
ಪ್ರಿಯಾಂಕ್ ಖರ್ಗೆಗೆ ಸುಳ್ಳು ಕೇಸ್ ಹಾಕಿಸೋದೇ ಕೆಲಸ ಅಂದಿದ್ದಾರೆ. ನಾನು ಎಷ್ಟು ಸುಳ್ಳು ಕೇಸ್ಗಳನ್ನು ಹಾಕಿಸಿದ್ದೀನಿ ಅಂತ ಅವರು ಹೇಳಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.


